ಕದನ ವಿರಾಮಕ್ಕೆ ಇಸ್ರೇಲ್ ಹಮಾಸ್ ಒಪ್ಪಿಗೆ: ಕತಾರ್ ನಿಂದ ಘೋಷಣೆ ಆಗ್ತಿದ್ದಂತೆ ಸಂಭ್ರಮಾಚರಣೆ
ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಧ್ಯಸ್ಥಿಕೆ ವಹಿಸಿದ ಕತಾರ್ ಘೋಷಣೆ ಮಾಡುತ್ತಿದ್ದಂತೆ ಯುದ್ಧ ಪೀಡಿತ ಗಾಝಾ ಜನತೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ನಡುವೆ ಇಸ್ರೇಲ್ ತನ್ನ ಆಕ್ರಮಣ ಮುಂದುವರೆಸಿದೆ.
ಕದನ ವಿರಾಮ ಜನವರಿ 19ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಕದನ ವಿರಾಮ ಘೋಷಣೆಯಾದ ಬಳಿಕ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 40 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಅಲ್ ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕದನ ವಿರಾಮ ಒಪ್ಪಿಗೆಯ ಮತದಾನ ಪ್ರಕ್ರಿಯೆಗೆ ಇಸ್ರೇಲ್ ಸಿದ್ದತೆ ನಡೆಸುತ್ತಿರುವ ನಡುವೆ ದಾಳಿ ನಡೆದಿದೆ ಎಂದು ವರದಿ ಹೇಳಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಕದನ ವಿರಾಮ ಒಪ್ಪಂದ ನಡೆದಿದೆ. ಇಸ್ರೇಲ್ ಸೇನೆಯನ್ನು ಸಂಪೂರ್ಣ ವಾಪಸ್ ಪಡೆಯಬೇಕು, ಯುದ್ಧಕ್ಕೆ ಶಾಶ್ವತ ವಿರಾಮ ಹಾಕಬೇಕು ಮತ್ತು ಗಾಝಾ ಜನತೆ ತಮ್ಮ ಮೂಲ ಸ್ಥಳಗಳಿಗೆ ಮರಳಲು ಅವಕಾಶ ನೀಡಬೇಕು ಷರತ್ತುಗಳನ್ನು ಕದನ ವಿರಾಮ ಒಪ್ಪಂದ ಪೂರೈಸಲಿದೆ ಎಂದು ಹಮಾಸ್ ಅಧಿಕಾರಿ ಇಜ್ಜತ್ ಅಲ್-ರಿಷೇಕ್ ಹೇಳಿದ್ದಾಗಿ ಅಲ್-ಜಝೀರಾ ವರದಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj