ಇಸ್ರೇಲ್ ನರಮೇಧ: ಬೆಥ್ಲೆಹೆಮ್ ನಲ್ಲಿ ದುಃಖದ ನಡುವೆ ಸರಳ ಕ್ರಿಸ್ಮಸ್ ಆಚರಣೆ
ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡನೇ ವರ್ಷವೂ ಏಸು ಕ್ರಿಸ್ತನ ಜನ್ಮ ಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಜನರು ಸಂಭ್ರವಿಲ್ಲದ ಸರಳ ಕ್ರಿಸ್‌ಮಸ್ ಆಚರಿಸಿದರು. ಇಸ್ರೇಲ್‌ನಲ್ಲಿರುವ ಸುಮಾರು 185, 000 ಮತ್ತು ಪ್ಯಾಲೆಸ್ತೀನ್ ಭೂ ಪ್ರದೇಶದ ವ್ಯಾಪ್ತಿಯಲ್ಲಿರುವ ಸುಮಾರು 47, 000 ಕ್ರಿಶ್ಚಿಯನ್ನರು ಶಾಂತಿಯುತ ಮತ್ತು ನೆಮ್ಮದಿಯ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಕ್ರಿಸ್‌ಮಸ್ ಮುನ್ನಾದಿನ ಸಂಜೆ ಬೆಥ್ಲೆಹೆಮ್‌ನ ಐತಿಹಾಸಿಕ ಬೀದಿಗಳಲ್ಲಿ ವಿಶೇಷ ವಸ್ತ್ರ ಧರಿಸಿ ಮೆರವಣಿಗೆ ನಡೆಸಿದ ‘ಟೆರ್ರಾ ಸ್ಯಾಂಕ್ಟಾ ಸ್ಕೌಟ್ ಟ್ರೂಪ್’ ತಂಡದ ಪುಟಾಣಿ ಮಕ್ಕಳು ‘ನಮಗೆ ಸಾವು ಬೇಡ, ಜೀವನ ಬೇಕು. ಗಾಝಾದಲ್ಲಿ ನರಮೇಧ ನಿಲ್ಲಿಸಿ’ ಎಂಬ ಆಗ್ರಹ ವ್ಯಕ್ತಪಡಿಸಿದರು.
ಸತತ ಎರಡನೇ ವರ್ಷ ಈ ಬಾರಿಯೂ ಬೆತ್ಮಹೆಮ್‌ನ ಕ್ರಿಸ್‌ಮಸ್ ಸಂಭ್ರಮದ ಮೇಲೆ ಯುದ್ದದ ಕಾರ್ಮೋಡ ಕವಿದಿತ್ತು. ಕಳೆದ ವರ್ಷವೂ ಬೆಥ್ಲೆಹೆಮ್‌ನಲ್ಲಿ ಅದ್ದೂರಿ ಕ್ರಿಸ್‌ಮಸ್ ಆಚರಣೆಯನ್ನು ರದ್ದುಗೊಳಿಸಲಾಗಿತ್ತು.
ಒಂದು ದೊಡ್ಡ ಕ್ರಿಸ್ಮಸ್ ಗಿಡವನ್ನು ಬೆಥ್ಲೆಹೆಮ್‌ನ ಚರ್ಚ್ ಬಳಿಯ ಚರ್ಚ್ ಆಫ್ ನೇಟಿವಿಟಿ ಐತಿಹಾಸಿಕ ಮ್ಯಾಂಗರ್ ಸ್ಕ್ವೇರ್ ಗುಹೆಯೊಂದರ ಮೇಲೆ ಪ್ರತಿವರ್ಷ ಕ್ರಿಸ್‌ಮಸ್ ವೇಳೆ ನಿಲ್ಲಿಸಲಾಗುತ್ತದೆ. ಈ ಜಾಗದಲ್ಲಿ ಏಸು ಕ್ರಿಸ್ತ 2,000 ವರ್ಷಗಳ ಹಿಂದೆ ಜನಿಸಿದರು ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿ ಸಂಭ್ರಮಕ್ಕೆ ಕಂಡಿಲ್ಲ.
ಗಾಝಾದಲ್ಲಿ ಇಸ್ರೇಲ್ ಆಕ್ರಮಣದಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಾಗಿಲ್ಲ. ಅಲ್ಲಿನ ಸ್ಥಳೀಯ ಕ್ರೈಸ್ತರು ಕೂಡ ತಮ್ಮದೆಲ್ಲವನ್ನು ಕಳೆದುಕೊಂಡಿದ್ದಾರೆ. ಸುದ್ದಿ ಸಂಸ್ಥೆ ಅಲ್-ಜಝೀರಾ ಜೊತೆ ಮಾತನಾಡಿರುವ ಗಾಝಾದ ಕ್ರೈಸ್ತ ವ್ಯಕ್ತಿ ರಮೇಝ್ ಸೌರಿ “ಕಳೆದ 14 ತಿಂಗಳಿನಿಂದ ನಾವು ಸೇಂಟ್ ಪೋರ್ಫಿರಿಯಸ್ ಮೈದಾನದಲ್ಲಿ ಮಲಗುತ್ತಿದ್ದೇವೆ. ನಮಗೆಲ್ಲಿಯ ಕ್ರಿಸ್‌ಮಸ್ ಸಂಭ್ರಮ? ಎಂದು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj