ಗಾಝಾ ಆಸ್ಪತ್ರೆ ಮೇಲೆ ದಾಳಿ: 500 ಜನರ ಸಾವಿಗೆ ಕಾರಣವಾದ ಇಸ್ರೇಲ್; ಹಮಾಸ್ ನಿಂದ ತಿರುಗೇಟು - Mahanayaka
8:24 PM Saturday 21 - September 2024

ಗಾಝಾ ಆಸ್ಪತ್ರೆ ಮೇಲೆ ದಾಳಿ: 500 ಜನರ ಸಾವಿಗೆ ಕಾರಣವಾದ ಇಸ್ರೇಲ್; ಹಮಾಸ್ ನಿಂದ ತಿರುಗೇಟು

18/10/2023

ಗಾಝಾ ನಗರದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಯೇ ಈ ಸ್ಫೋಟಕ್ಕೆ ಕಾರಣ ಎಂದು ಹಮಾಸ್ ಆರೋಪಿಸಿದೆ. ಇತ್ತ ಫೆಲೆಸ್ತೀನ್ ಬಂಡುಕೋರರ ಗುಂಪು ಹಾರಿಸಿದ ರಾಕೆಟ್ ಆಸ್ಪತ್ರೆಗೆ ಅಪ್ಪಳಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಇಸ್ರೇಲ್ ಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಟೆಲ್ ಅವೀವ್ ಗೆ ಭೇಟಿ ನೀಡುವ ಮುನ್ನಾದಿನದಂದು ಈ ದಾಳಿ ನಡೆದಿದೆ.

ಗಾಝಾದ ಆಸ್ಪತ್ರೆಯಲ್ಲಿ ಕನಿಷ್ಠ 500 ಜನರ ಸಾವಿಗೆ ಕಾರಣವಾದ ಸ್ಫೋಟದ ನಂತರ ತೀವ್ರಗೊಳ್ಳುತ್ತಿರುವ ಯುದ್ಧ ಪರಿಸ್ಥಿತಿಯ ಮಧ್ಯೆ ಬೈಡನ್ ಇಂದು ಇಸ್ರೇಲ್ ಗೆ ಆಗಮಿಸಲಿದ್ದಾರೆ. ತಮ್ಮ ಯುದ್ಧಕಾಲದ ಭೇಟಿಯ ಸಮಯದಲ್ಲಿ, ಬೈಡನ್ ಇಸ್ರೇಲ್ ನೊಂದಿಗೆ ಒಗ್ಗಟ್ಟನ್ನು ಪುನರುಚ್ಚರಿಸಲಿದ್ದಾರೆ. ಏತನ್ಮಧ್ಯೆ, ಗಾಝಾ ಆಸ್ಪತ್ರೆಯ ದಾಳಿಯ ಹಿನ್ನೆಲೆಯಲ್ಲಿ ಜೋರ್ಡಾನ್ ತಾನು ಆಯೋಜಿಸಬೇಕಿದ್ದ ಪ್ರಾದೇಶಿಕ ಶೃಂಗಸಭೆಯನ್ನು ರದ್ದುಗೊಳಿಸಿದೆ.

ಟೆಲ್ ಅವೀವ್ ಗೆ ಹೋಗುವ ಮಾರ್ಗದಲ್ಲಿ ಯುಎಸ್ ಅಧ್ಯಕ್ಷರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದರು.


Provided by

ಇನ್ನು ಆಸ್ಪತ್ರೆಯ ದಾಳಿಗೆ ಪ್ರತಿಕ್ರಿಯೆಯಾಗಿ ಅಮ್ಮಾನ್ ನಲ್ಲಿ ಬುಧವಾರ ನಿಗದಿಯಾಗಿದ್ದ ಬೈಡನ್ ಅವರೊಂದಿಗಿನ ಪ್ರಾದೇಶಿಕ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಜೋರ್ಡಾನ್ ವಿದೇಶಾಂಗ ಸಚಿವರು ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷರು, ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸ್ಸಿ ಅವರನ್ನು ಭೇಟಿಯಾಗಬೇಕಿತ್ತು.

ಇತ್ತೀಚಿನ ಸುದ್ದಿ