ಅಟ್ಯಾಕ್: ಉತ್ತರ ಗಾಝಾದಲ್ಲಿ 200ಕ್ಕೂ ಹೆಚ್ಚು ಹಿಝ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ

26/10/2024

ದಕ್ಷಿಣ ಲೆಬನಾನ್‌ನಲ್ಲಿ 200 ಕ್ಕೂ ಹೆಚ್ಚು ಹಿಝ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಕಳೆದೊಂದು ದಿನದಲ್ಲಿ ಉತ್ತರ ಗಾಝಾದಲ್ಲಿ ಮರುಸಂಘಟನೆ ಮಾಡುವ ಹಮಾಸ್ ಪ್ರಯತ್ನಗಳ ವಿರುದ್ಧ ಪಡೆಗಳು ಏಕಕಾಲದಲ್ಲಿ ದಾಳಿಗಳನ್ನು ಮುಂದುವರಿಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಬೆಳಿಗ್ಗೆ ತಿಳಿಸಿವೆ.

ದಕ್ಷಿಣ ಲೆಬನಾನ್ ನಲ್ಲಿ ಹತ್ಯೆಗೀಡಾದವರಲ್ಲಿ ಹಿಝ್ಬುಲ್ಲಾದ ಗಣ್ಯ ರಾಡ್ವಾನ್ ಘಟಕದ ಐತರೂನ್ ಪ್ರದೇಶದ ಕಮಾಂಡರ್ ಅಬ್ಬಾಸ್ ಅದ್ನಾನ್ ಮುಸ್ಲಿಮ್ ಕೂಡ ಸೇರಿದ್ದಾರೆ. ಉತ್ತರ ಇಸ್ರೇಲ್‌ನಲ್ಲಿ ಸಮುದಾಯಗಳು ಮತ್ತು ಐಡಿಎಫ್ ಪಡೆಗಳ ವಿರುದ್ಧ ಹಲವಾರು ದಾಳಿಗಳನ್ನು ನಡೆಸಲು ಮುಸ್ಲಿಂ ಕಾರಣನಾಗಿದ್ದ.

ಅಲ್ಲದೇ ಐಡಿಎಫ್ ಪಡೆಗಳು ಹೊಂಚು ದಾಳಿ ನಡೆಸಲು ತಯಾರಿ ನಡೆಸುತ್ತಿದ್ದ ಹಿಝ್ಬುಲ್ಲಾ ತಂಡವನ್ನು ಗುರುತಿಸಿ ನಿರ್ಮೂಲನೆ ಮಾಡಿದವು. ನಂತರ ಅವರು ರಷ್ಯಾ ನಿರ್ಮಿತ ಕೊರ್ನೆಟ್ ಕ್ಷಿಪಣಿ ಲಾಂಚರ್ ಅನ್ನು ಕಂಡುಹಿಡಿದರು, ಅದನ್ನು ಅವರು ಕಿತ್ತುಹಾಕಿದ್ದಾರೆ.

ಹಮಾಸ್ ತನ್ನನ್ನು ಪುನಃ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಉತ್ತರ ಗಾಝಾ ಪಟ್ಟಣ ಜಬಾಲಿಯಾದಲ್ಲಿ ಇಸ್ರೇಲ್ ಸೈನಿಕರು ದಾಳಿ ನಡೆಸಿದ್ದಾರೆ. ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version