ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ವೈಮಾನಿಕ ದಾಳಿಯಲ್ಲಿ  69 ಮಕ್ಕಳ ಸಹಿತ 256 ಮಂದಿ ಸಾವು

israel palestine
20/05/2021

ನ್ಯೂಯಾರ್ಕ್: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಎಂಬ ಪುಟ್ಟ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಈವರೆಗೆ  69 ಮಕ್ಕಳು ಸೇರಿದಂತೆ ಒಟ್ಟು 256 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಬಹುಪಾಲು ಸಾವು ನೋವುಗಳು ಪ್ಯಾಲೆಸ್ತೀನ್ ನಲ್ಲಿಯೇ ಸಂಭವಿಸಿದೆ. ಗಾಜಾದಲ್ಲಿ 63 ಮಕ್ಕಳು ಸೇರಿದಂತೆ 219 ಜನರು ಬಲಿಯಾಗಿದ್ದಾರೆ. ಪ್ಯಾಲೆಸ್ತೀನ್ ನ ಪಶ್ಚಿಮ ಭಾಗದಲ್ಲಿ ನಾಲ್ವರು ಮಕ್ಕಳು ಮತ್ತು ಸೈನಿಕರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.

ದಾಳಿಯಿಂದಾಗಿ ಗಾಜಾದ 6 ಆಸ್ಪತ್ರೆಗಳು, 9 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಲಾಗಿದೆ. ಗಾಜಾ ಕೇಂದ್ರ ಪ್ರಯೋಗಾಲಯದಲ್ಲಿ ಕೊವಿಡ್ 19 ಪರೀಕ್ಷೆಗಳನ್ನ ನಿಲ್ಲಿಸಲಾಗಿದೆ. ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿದೆ.

ಇನ್ನೂ ದಾಳಿಯಲ್ಲಿ ತೀವ್ರವಾಗಿ ಹಾನಿಗೊಂಡ ಪ್ಯಾಲೆಸ್ತೀನ್ ಪ್ರಾಂತ್ಯಗಳಿಗೆ 14 ಮಿಲಿಯಲ್ ಡಾಲರ್ ನೆರವನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈಗಾಗಲೇ ವಿಶ್ವಸಂಸ್ಥೆ, ಮನೆಗಳನ್ನು ಕಳೆದುಕೊಂಡವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದೆ. ಮನೆಗಳ ದುರಸ್ತಿಯ ಭರವಸೆಯನ್ನು ಕೂಡ ನೀಡಿದೆ.

ಇತ್ತೀಚಿನ ಸುದ್ದಿ

Exit mobile version