ಇಸ್ರೇಲ್ ಫೆಲೆಸ್ತೀನ್ ಕದನ ವಿರಾಮ: ಗಾಝಾ ಪ್ರವೇಶಿಸಿದ 630ರಷ್ಟು ನೆರವಿನ ಟ್ರಕ್ ಗಳು

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಕದನ ವಿರಾಮ ಜಾರಿಯಾದ ಮೊದಲ ದಿನ 630 ರಷ್ಟು ನೆರವಿನ ಟ್ರಕ್ ಗಳು ಗಾಝಾ ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿ ಗುಟ್ ರೆಸ್ ಹೇಳಿದ್ದಾರೆ. ಈ ಯುದ್ಧದಿಂದ ಅತ್ಯಧಿಕ ಅನಾಹುತವನ್ನು ಅನುಭವಿಸಿದ್ದ ಪಶ್ಚಿಮ ಗಾಝಾಕ್ಕೆ ಇವುಗಳಲ್ಲಿ 300ರಷ್ಟು ಟ್ರಕ್ಕುಗಳು ತಲುಪಿವೆ ಎಂದವರು ಹೇಳಿದ್ದಾರೆ.
ಗಾಝಕ್ಕೆ ನಿರ್ಬಂಧವನ್ನು ವಿಧಿಸಿದ ಇಸ್ರೇಲ್ ಇದೀಗ ಕದನ ವಿರಾಮ ಒಪ್ಪಂದದಂತೆ ಆಹಾರ ವಸ್ತುಗಳನ್ನು ತಲುಪಿಸುವ ಟ್ರಕ್ ಗಳಿಗೆ ಅನುಮತಿ ನೀಡಿದೆ. ಇದೀಗ ಗಾಝಾದ ಮಂದಿ ತಮ್ಮ ಅವಶೇಷಗಳಂತಾದ ಮನೆಗೆ ಮರಳುತ್ತಿದ್ದಾರೆ.
ಮೂರು ಹಂತದಲ್ಲಿ ಈ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಮೊದಲನೇ ಹಂತವಾಗಿ ಮಹಿಳೆಯರು ಮಕ್ಕಳು ವೃದ್ಧರು ಸಹಿತ 33 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಬೇಕಾಗಿದೆ. ಗಾಯಗೊಂಡವರು ರೋಗಿಗಳು ಮುಂತಾದವರನ್ನು ಕೂಡ ಬಿಡುಗಡೆಗೊಳಿಸಲಾಗುವುದು.
ಒಪ್ಪಂದ ಏರ್ಪಾಟಾದ 7ನೇ ದಿನದಂದು ನಾಲ್ಕು ಮಂದಿ ಮತ್ತು 14ನೇ ದಿನದಂದು ಮೂರು ಮಂದಿಯನ್ನು ಬಿಡುಗಡೆಗೊಳಿಸಲಾಗುವುದು. 28 ಮತ್ತು 35 ದಿನಗಳಲ್ಲಿ ಮೂವರನ್ನು ಬಿಡುಗಡೆಗೊಳಿಸಲಾಗುವುದು. ಒಪ್ಪಂದದ ಪ್ರಕಾರ ಉಳಿದವರು ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj