ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಯಹೂದಿಯರನ್ನು ತಂದು ಕೂರಿಸುವ ಭಾರೀ ದೊಡ್ಡ ಯೋಜನೆಗೆ ಇಸ್ರೇಲ್ ನಿರ್ಧಾರ

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಯಹೂದಿಯರನ್ನು ತಂದು ಕೂರಿಸುವ ಭಾರೀ ದೊಡ್ಡ ಯೋಜನೆಗೆ ಇಸ್ರೇಲ್ ಮುಂದಾಗಿದೆ. ಈ ಕಾರಣಕ್ಕಾಗಿ ಪಶ್ಚಿಮ ದಂಡೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಮನೆಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಫೆಲಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಒಂದೇ ಪರಿಹಾರ ಎಂದು ವಾದಿಸುತ್ತಿರುವ ಇಸ್ರೇಲಿನ ಪೀಸ್ ನೌ ಏಜೆನ್ಸಿಯು ಈ ಸತ್ಯವನ್ನು ಬಹಿರಂಗಪಡಿಸಿದೆ.
ಯಹೂದಿ ಅಕ್ರಮ ನಿವಾಸಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಫೆಲಸ್ತೀನಿ ನಗರವಾದ ಬೆತ್ಲೆ ಹೇಮ್ ನಗರದ ಅಭಿವೃದ್ಧಿಯನ್ನು ತಡೆಯುವುದು ಇದರ ಹಿಂದಿನ ಉದ್ದೇಶ ಎಂದು ತಿಳಿಸಲಾಗಿದೆ. ಆದರೆ ಹೀಗೆ ಸಾವಿರಕ್ಕಿಂತಲೂ ಅಧಿಕ ಮನೆಗಳನ್ನು ಕಟ್ಟುವುದು ತಕ್ಷಣ ಸಾಧ್ಯವಾಗಲಾರದು ಮತ್ತು ಇದರ ವಿವಿಧ ಪ್ರಕ್ರಿಯೆಗಳು ಮುಗಿಯುವಾಗ ಒಂದು ವರ್ಷ ತಗಳಬಹುದು ಎಂದು ತಿಳಿದುಬಂದಿದೆ.
ಈಗಾಗಲೇ ಪಶ್ಚಿಮದಂಡೆಯಲ್ಲಿ ನೂರಕ್ಕಿಂತಲೂ ಅಧಿಕ ಅಕ್ರಮ ನಿವಾಸಗಳನ್ನು ಇಸ್ರೇಲ್ ನಿರ್ಮಿಸಿದೆ. 30 ಲಕ್ಷಕ್ಕಿಂತಲೂ ಅಧಿಕ ಫೆಲಸ್ತೀನಿಯರು ಪಶ್ಚಿಮ ದಂಡೆಯಲ್ಲಿ ವಾಸಿಸುತ್ತಿದ್ದು ಇಲ್ಲಿ 5 ಲಕ್ಷದಷ್ಟು ಯಹೂದಿಯರೂ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಇಸ್ರೇಲಿನ ಪೌರತ್ವವಿದೆ. ಫೆಲಸ್ತೀನಿಯರೊಂದಿಗೆ ಇಸ್ರೇಲ್ ತಾರತಮ್ಯದಿಂದ ನಡೆದುಕೊಳ್ಳುತ್ತಿದೆ ಎಂದು ಈ ನಡುವೆ ಹಲವು ಏಜೆನ್ಸಿಗಳು ಆರೋಪಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj