ಗಾಝಾದ ಅಲ್-ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್ ಮತ್ತೆ ದಾಳಿ: ಹಮಾಸ್ ಪಡೆಯನ್ನು ನಿರ್ನಾಮ ಮಾಡಲು ಶತಪ್ರಯತ್ನ - Mahanayaka

ಗಾಝಾದ ಅಲ್-ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್ ಮತ್ತೆ ದಾಳಿ: ಹಮಾಸ್ ಪಡೆಯನ್ನು ನಿರ್ನಾಮ ಮಾಡಲು ಶತಪ್ರಯತ್ನ

15/11/2023

ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಬಂಡುಕೋರರ ವಿರುದ್ಧ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಆಸ್ಪತ್ರೆಯ ಅಧಿಕಾರಿಯೊಬ್ಬರ ಪ್ರಕಾರ, ಇಸ್ರೇಲಿ ಪಡೆಗಳು ವೈದ್ಯಕೀಯ ಸಂಕೀರ್ಣದ ಪಶ್ಚಿಮ ಭಾಗದ ಮೇಲೆ ದಾಳಿ ನಡೆಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಏತನ್ಮಧ್ಯೆ, ಗಾಜಾ ಪಟ್ಟಿಯಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಗಾಗಿ ಟ್ರಕ್‌ಗಳು ಬಳಸಲು 24,000 ಲೀಟರ್ ಡೀಸೆಲ್ ಇಂಧನವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದಿಸಿದ್ದಾರೆ.

ಅಕ್ಟೋಬರ್ 7 ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಕಳೆದ 10 ದಿನಗಳಲ್ಲಿ 200,000 ಜನರು ದಕ್ಷಿಣದಿಂದ ಪಲಾಯನ ಮಾಡಿದ್ದಾರೆ. ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಯುದ್ಧ ಪ್ರಾರಂಭವಾದಾಗಿನಿಂದ 11,000 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಇಸ್ರೇಲ್ ನಲ್ಲಿ, 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 240 ಒತ್ತೆಯಾಳುಗಳನ್ನು ಇಸ್ರೇಲ್ ನಿಂದ ಗಾಜಾಗೆ ಕರೆದೊಯ್ಯಲಾಗಿದೆ.

ಐಡಿಎಫ್ ಪಡೆಯು ಆಸ್ಪತ್ರೆಯ ವ್ಯಾಪಕ ಪ್ರಮಾಣದ ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ನಿಯಮಿತ ಸಂವಾದವನ್ನು ಮಾಡಿದೆ. ಆಸ್ಪತ್ರೆಯಲ್ಲಿ ಹಾಜರಿರುವ ಎಲ್ಲಾ ಹಮಾಸ್ ಬಂಡುಕೋರರಿಗೆ ಶರಣಾಗುವಂತೆ ನಾವು ಕರೆ ನೀಡುತ್ತೇವೆ” ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಗಾಝಾದ ಅಲ್-ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿಯ ನಂತರ ಹಮಾಸ್ ಹೇಳಿಕೆ ನೀಡಿದ್ದು “ಅಲ್-ಶಿಫಾ ವೈದ್ಯಕೀಯ ಸಂಕೀರ್ಣದ ಮೇಲೆ ಆಕ್ರಮಿತ ಇಸ್ರೇಲ್ ಸೇನೆಯ ದಾಳಿಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಸಂಪೂರ್ಣ ಜವಾಬ್ದಾರರು” ಎಂದು ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ, ಭಯೋತ್ಪಾದಕರು ಅಲ್-ಶಿಫಾದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಇಸ್ರೇಲ್ ನ ತೀರ್ಮಾನವನ್ನು ಯುಎಸ್ ಗುಪ್ತಚರ ಹೇಳಿಕೆ ಬೆಂಬಲಿಸಿದೆ. ಇದು ದಾಳಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಹಮಾಸ್ ಪ್ರತಿಕ್ರಿಯೆ ‌ನೀಡಿದೆ.

“ಅಲ್-ಶಿಫಾ ವೈದ್ಯಕೀಯ ಸಂಕೀರ್ಣವನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತಿದೆ ಎಂದು ಹೇಳಿಕೊಂಡು ಶ್ವೇತಭವನ ಮತ್ತು ಇಸ್ರೇಲ್ ಸುಳ್ಳು ಹೇಳಿ ಫೆಲೆಸ್ತೀನ್ ನಾಗರಿಕರ ವಿರುದ್ಧ ಹೆಚ್ಚಿನ ಹತ್ಯಾಕಾಂಡಗಳನ್ನು ನಡೆಸುತ್ತಿದೆ” ಎಂದು ಹಮಾಸ್ ಆರೋಪಿಸಿದೆ.

ಇತ್ತೀಚಿನ ಸುದ್ದಿ