ರಿಲೀಸ್: 7 ತಿಂಗಳ ಬಳಿಕ ವೈದ್ಯರ ಜತೆ 50 ಮಂದಿಯನ್ನು ಬಿಡುಗಡೆ ಮಾಡಿದ ಇಸ್ರೇಲ್: ಕ್ರೂರ ಮನಸ್ಸು ಬದಲಾಯಿತಾ..? - Mahanayaka

ರಿಲೀಸ್: 7 ತಿಂಗಳ ಬಳಿಕ ವೈದ್ಯರ ಜತೆ 50 ಮಂದಿಯನ್ನು ಬಿಡುಗಡೆ ಮಾಡಿದ ಇಸ್ರೇಲ್: ಕ್ರೂರ ಮನಸ್ಸು ಬದಲಾಯಿತಾ..?

02/07/2024

ಏಳು ತಿಂಗಳ ಹಿಂದೆ ಇಸ್ರೇಲ್ ಸೇನೆ ಬಂಧಿಸಿ ಕೊಂಡೊಯ್ದಿದ್ದ ಗಾಜಾದ ಅಲ್ ಶಿಫಾ ಆಸ್ಪತ್ರೆಯ ಡೈರೆಕ್ಟರ್ ಡಾಕ್ಟರ್ ಮಹಮ್ಮದ್ ಅಬೂ ಸೆಲ್ ಮಿಯಾ ಅವರನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಇವರ ಜೊತೆಗೆ ಇನ್ನೂ ಐವತ್ತು ಮಂದಿ ಬಂಧಿತರನ್ನು ಇಸ್ರೇಲ್ ಬಂಧಮುಕ್ತ ಮಾಡಿದೆ. ಹಮಾಸ್ ನ ಕೇಂದ್ರ ಎಂದು ಆರೋಪಿಸಿ ನವೆಂಬರ್ನಲ್ಲಿ ಇಸ್ರೇಲ್ ಸೇನೆ ಅಲ್ ಶಿಫಾ ಆಸ್ಪತ್ರೆಯ ಮೇಲೆ ದಾಳಿ ಮಾಡಿ ಇವರನ್ನು ಬಂದನಕ್ಕೆ ಒಳಪಡಿಸಿತ್ತು.
ಇಸ್ರೇಲಿ ಬಂಧನದಲ್ಲಿ ತಾನು ಸಹಿತ ಬಂಧಿತ ಫೆಲೆಸ್ತೀನಿಯರು  ತೀವ್ರ ದೌರ್ಜನ್ಯವನ್ನು ಎದುರಿಸಿದ್ದೇವೆ ಎಂದು ಡಾಕ್ಟರ್ ಸೆಲ್ ಮಿಯಾ ತಿಳಿಸಿದ್ದಾರೆ.


Provided by

ಇಸ್ರೇಲ್ ಯೋಧರು ಪ್ರತಿದಿನ ಬಂಧನದಲ್ಲಿರುವ ಫೆಲೆಸ್ತೀನಿಯರಿಗೆ ತೀವ್ರ ಕಿರುಕುಳವನ್ನು ನೀಡಿದ್ದಾರೆ. ನನ್ನ ತಲೆ ಒಡೆಯಲಾಗಿತ್ತು ಮತ್ತು ಬೆರಳನ್ನು ತೀವ್ರ ಘಾಸಿಗೊಳಿಸಲಾಗಿತ್ತು. ನನಗೆ ಚಿಕಿತ್ಸೆ ನೀಡಬೇಕಾಗಿದ್ದ ವೈದ್ಯರು ಕೂಡ ಅತ್ಯಂತ ಕಟುವಾಗಿ ವರ್ತಿಸಿದರು. ನಮ್ಮಲ್ಲಿನ ಕೆಲವರಿಗೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಅವರ ಕೈ ಕಾಲುಗಳನ್ನು ತುಂಡರಿಸ ಹಾಕಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ನನ್ನನ್ನು ರಾಜಕೀಯ ಕಾರಣಕ್ಕಾಗಿ ಬಂಧಿಸಲಾಗಿತ್ತು. ಮೂರು ಬಾರಿ ನನ್ನನ್ನು ಕೋರ್ಟಿಗೆ ಹಾಜರುಪಡಿಸಲಾಯಿತು. ಆದರೆ ಒಂದೇ ಒಂದು ಬಾರಿ ನನ್ನ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿಲ್ಲ ಅಥವಾ ತನ್ನ ವಕೀಲರೊಂದಿಗೆ ಮಾತಾಡುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ ಎಂದವರು ಹೇಳಿದ್ದಾರೆ. ಇದೇ ವೇಳೆ ಡಾಕ್ಟರ್ ಸೆಲ್ ಮಿಯಾ ಅವರ ಆರೋಪದ ಬಗ್ಗೆ ಇಸ್ರೇಲ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ