ಯಮನ್ ನಿಂದ ಹೂತಿಗಳಿಂದ ಮಿಸೈಲ್ ದಾಳಿ: ಬೆಚ್ಚಿಬಿದ್ದ ಇಸ್ರೇಲ್
ಯಮನ್ ನಿಂದ ಹೂತಿಗಳು ನಡೆಸಿದ ಮಿಸೈಲ್ ದಾಳಿಗೆ ಇಸ್ರೇಲ್ ಬೆಚ್ಚಿ ಬಿದ್ದಿದೆ ಎಂದು ವರದಿಯಾಗಿದೆ. ಹೂತಿಗಳ ಹೊಸ ಹೈಪರ್ ಸಾನಿಕ್ ಬ್ಯಾಲೆಸ್ಟಿಕ್ ಮಿಸೈಲ್ 11.5 ನಿಮಿಷಗಳಲ್ಲಿ 2040 ಕಿಲೋಮೀಟರ್ ಸಾಗಿ ಇಸ್ರೇಲ್ ಒಳಗೆ ಭಾರಿ ಅನಾಹುತವನ್ನು ಮಾಡಿದೆ ಎಂದು ಹೂತಿಗಳು ಹೇಳಿದ್ದಾರೆ. ಟೆಲ್ ಅವಿವ್ ಸಮೀಪದ ಸೇನಾ ಕೇಂದ್ರವಾದ ಜಾಫರ್ ಪ್ರದೇಶವನ್ನು ಗುರಿಯಾಗಿಸಿ ಹೂತಿಗಳು ಈ ಮಿಸೈಲ್ ಹಾರಿಸಿದ್ದರು. ಈ ಮಿಸೈಲ್ ತಡೆಯಲು ಇಸ್ರೇಲ್ ಗೆ ಸಾಧ್ಯವಾಗಿಲ್ಲ ಮತ್ತು ನಮ್ಮ ನಿಗದಿತ ಗುರಿ ಈಡೇರಿದೆ ಎಂದು ಹೂತಿ ಕಮಾಂಡರ್ ಯಹಿಯಾ ಸಾರಿ ಹೇಳಿದ್ದಾರೆ.
20 ಇಂಟರ್ ಸೆಪ್ಟರುಗಳನ್ನು ದಾಟಿ ನಮ್ಮ ಮಿಸೈಲ್ ಇಸ್ರೇಲ್ ಗೆ ನುಗ್ಗಿದೆ ಎಂದು ಹೂತಿ ಕಮಾಂಡರ್ ಹೇಳಿದ್ದಾರೆ. ಫೆಲೆಸ್ತೀನ್ ಟೂ ಎಂಬ ಮಿಸೈಲನ್ನು ಈ ಆಕ್ರಮಣಕ್ಕೆ ಉಪಯೋಗಿಸಲಾಗಿದೆ. ಹಾಗೆಯೇ ಮಿಸೈಲನ್ನು ಸ್ಥಾಪಿಸುವ ದೃಶ್ಯವನ್ನು ಕೂಡ ಹೂತಿಗಳು ಬಿಡುಗಡೆಗೊಳಿಸಿದ್ದಾರೆ.
2150 ಕಿಲೋಮೀಟರ್ಗಳಷ್ಟು ದೂರ ಈ ಮಿಸೈಲ್ಗಳು ಹೋಗಿ ತಲುಪಬಹುದಾಗಿದೆ. ಶಬ್ದಕ್ಕಿಂತ 16 ಪಟ್ಟು ಹೆಚ್ಚು ವೇಗದಿಂದ ಇದು ಚಲಿಸಬಲ್ಲದು. ಇಸ್ರೇಲ್ ಸ್ಥಾಪಿಸಿರುವ ಐಯರ್ನ್ ಡಾಂ ಎಂಬ ರಕ್ಷಣಾ ಕವಚವನ್ನು ದಾಟಿ ಈ ಮಿಸೈಲ್ ಹೋಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಮಿಸೈಲ್ ಬರುವುದಕ್ಕಿಂತ ಮೊದಲು ಟೆಲ್ ಅವಿವ್ ಮತ್ತು ಮಧ್ಯ ಇಸ್ರೇಲ್ ನಲ್ಲಿ ಅಪಾಯದ ಸೈರನನ್ನು ಮೊಳಗಿಸಲಾಗಿತ್ತು. ಇದರಿಂದಾಗಿ ಜನರು ಸುರಕ್ಷಿತ ಸ್ಥಳಕ್ಕೆ ಧಾವಿಸಿದರು. ಸುಮಾರು 24 ಲಕ್ಷದಷ್ಟು ಮಂದಿ ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth