ಕದನ ವಿರಾಮ ಒಪ್ಪಂದ ವಿಚಾರ: ಹಮಾಸ್ ನ ಜೊತೆ ಅಮೆರಿಕ ಮುಖಾಮುಖಿ ಮಾತಾಡಿರುವುದಕ್ಕೆ ಇಸ್ರೇಲ್ ಅಸಂತೋಷ

07/03/2025

ಕದನ ವಿರಾಮ ಒಪ್ಪಂದದ ಒಂದನೇ ಹಂತವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಹಮಾಸ್ ನ ಜೊತೆ ಅಮೆರಿಕ ಮುಖಾಮುಖಿ ಮಾತಾಡಿರುವುದಕ್ಕೆ ಇಸ್ರೇಲ್ ಅಸಂತೋಷ ವ್ಯಕ್ತಪಡಿಸಿದೆ. ಹಮಾಸ್ ನೊಂದಿಗೆ ಅಮೆರಿಕ ನೇರಾ ನೇರ ಮಾತುಕತೆ ನಡೆಸುವುದಕ್ಕೆ ಇಸ್ರೇಲ್ ವಿರುದ್ಧವಾಗಿದೆ ಎಂದು ಇಸ್ರೇಲ್ ಉನ್ನತ ಮುಖಂಡರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಆದರೆ ಇಸ್ರೇಲ್ ಗೆ ನೆರವಾಗುವುದಕ್ಕಾಗಿ ತಾನು ಹಮಾಸ್ ನೊಂದಿಗೆ ನೇರ ನೇರ ಮಾತುಕತೆ ನಡೆಸಿರುವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದೇ ಈ ಮಾತುಕತೆಯ ಉದ್ದೇಶ ಎಂದು ಟ್ರಂಪ್ ಹೇಳಿದ್ದಾರೆ.

ಈ ಮಾತುಕತೆಯ ಬಳಿಕವೇ ಟ್ರಂಪ್ ಅವರು ಹಮಾಸ್ ಗೆ ಎಚ್ಚರಿಕೆ ನೀಡಿದ್ದರು. ಒದ್ದೆಯಾಳುಗಳನ್ನು ಹಮಾಸ್ ತಕ್ಷಣ ಬಿಡುಗಡೆಗೊಳಿಸಬೇಕು, ಇಲ್ಲದಿದ್ದರೆ ಇಸ್ರೇಲ್ ಗೆ ಶಸ್ತ್ರಾಸ್ತ್ರಗಳ ಸಹಿತ ಎಲ್ಲ ನೆರವನ್ನು ನೀಡುವೆ ಮತ್ತು ಹಮಾಸನ್ನು ನಾಶ ಮಾಡುವೆ ಎಂದವರು ಬೆದರಿಸಿದ್ದರು.

ಆದರೆ ಟ್ರಂಪ್ ಅವರ ಬೆದರಿಕೆಗೆ ಹಮಾಸ್ ಸೊಪ್ಪು ಹಾಕಿಲ್ಲ. ಕದನ ವಿರಾಮ ಒಪ್ಪಂದದಿಂದ ಹಿಂಜರಿಯಲು ಟ್ರಂಪ್ ಮತ್ತು ನೆತನ್ಯಾಹು ಬಯಸಿದ್ದಾರೆ ಮತ್ತು ಶಾಶ್ವತ ಕದನ ವಿರಾಮ ಒಪ್ಪಂದ ದ ಹೊರತು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಹಮಾಸ್ ಸ್ಪಷ್ಟಪಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version