2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!
ಜೇರುಸಲೆಂ: ಇಸ್ರೇಲ್ ರಾಜಧಾನಿ ಜೇರುಸಲೆಂನಲ್ಲಿ ಸುಮಾರು 2,700 ವರ್ಷದ ಹಳೆಯದಾದ ಶೌಚಾಲಯ ಪತ್ತೆಯಾಗಿರುವುದಾಗಿ ಅಲ್ಲಿನ ಪುರಾತನ ಇಲಾಖೆ ಹೇಳಿದ್ದು, ಈ ಶೌಚಾಲಯಗಳು ಈಗಿನ ಶೌಚಾಲಯಗಳಂತೆಯೇ ಇದ್ದವು ಎಂದು ಹೇಳಿದೆ.
ಶೌಚಾಲಯದ ಫೋಟೊಗಳನ್ನು ಬಿಡುಗಡೆ ಮಾಡಿರುವ ಅಲ್ಲಿನ ಸ್ಥಳೀಯಾಡಳಿತ, ‘2,700 ವರ್ಷಗಳ ಹಿಂದೆಯ ಈ ಪುರಾತನ ಶೌಚಾಲಯ ನಿರ್ಮಾಣವಾಗಿರುವುದನ್ನು ಖಾತ್ರಿಪಡಿಸಿಕೊಂಡಿದೆ.
ಕಲ್ಲನ್ನು ಕತ್ತರಿಸಿ ಈ ಶೌಚಾಲಯವನ್ನು ಮಾಡಲಾಗಿದ್ದು, ಆರಾಮವಾಗಿ ಕುಳಿತುಕೊಳ್ಳಲು ಆಯತಾಕಾರದಲ್ಲಿ ಮಾಡಲಾದ ಶೌಚಾಲಯ ಇದಾಗಿದ್ದು ಇದರ ಕೆಳಗೆ ಸೆಪ್ಟಿಕ್ ಟ್ಯಾಂಕ್ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುರಾತನ ಶೌಚಾಲಯ ಪತ್ತೆಯಾಗಿರುವ ಜಾಗದಲ್ಲಿ ಇನ್ನೂ ಕೂಡ ಉತ್ಕನನ ಮುಂದುವರೆದಿದೆ. ಈಗ ಸಿಕ್ಕಿರುವ ಪಳಿಯುಳಿಕೆಗಳು, ಜೇರುಸಲೆಂನಲ್ಲಿ ಶ್ರೀಮಂತರು ವಾಸವಾಗಿದ್ದರು ಎಂಬುದನ್ನು ಸ್ಪಷ್ಟವಾಗುತ್ತದೆ. ಯಾಕೆಂದರೆ ಈ ಶೌಚಾಲಯಗಳು ಶ್ರೀಮಂತರು ಬಳಸುವ ಶೌಚಾಲಯದಂತೆ ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ
ಮನೆಯ ಗೋಡೆ ಕುಸಿದು ಬಿದ್ದು ಒಂದೇ ಕುಟುಂಬದ ಐವರು ಸಾವು!
ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!
ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ
ಕಾರ್ಮಿಕರ ಮೇಲೆ ಗುಂಡು ಹಾರಾಟ ಪ್ರಕರಣ ದಿಕ್ಕು ತಪ್ಪದ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿ | ಡಿವೈಎಫ್ ಐ ಆಗ್ರಹ
ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ರೈತರ ಹತ್ಯೆ ನಡೆದಿದೆ | ರವಿಕಿರಣ್ ಪೂನಚ




























