ಫುಟ್ಬಾಲ್ ಪಂದ್ಯದ ವೇಳೆ ಇಸ್ರೇಲ್ ಮತ್ತು ಫೆಲೆಸ್ತೀನಿ ಅಭಿಮಾನಿಗಳ ನಡುವೆ ಮಾರಾಮಾರಿ - Mahanayaka

ಫುಟ್ಬಾಲ್ ಪಂದ್ಯದ ವೇಳೆ ಇಸ್ರೇಲ್ ಮತ್ತು ಫೆಲೆಸ್ತೀನಿ ಅಭಿಮಾನಿಗಳ ನಡುವೆ ಮಾರಾಮಾರಿ

08/11/2024

ನೆದರ್ ಲ್ಯಾಂಡ್ ನ ರಾಜಧಾನಿ ಆಮ್ ಸ್ಟರ್ ಡಾಮ್ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಇಸ್ರೇಲ್ ಮತ್ತು ಫೆಲೆಸ್ತೀನಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಫೆಲೆಸ್ತೀನಿ ಅಭಿಮಾನಿಗಳ ವಿರುದ್ಧ ಇಸ್ರೇಲ್ ಅಭಿಮಾನಿಗಳು ದ್ವೇಷದ ಘೋಷಣೆ ಕೂಗಿದ್ದು ಮತ್ತು ಫೆಲೆಸ್ತೀನ್ ದ್ವಜವನ್ನು ಹರಿದೆಸೆದದ್ದು ವಿಕೋಪಕ್ಕೆ ಕಾರಣವಾಗಿದೆ.

ಈ ಘರ್ಷಣೆಯಲ್ಲಿ ಅನೇಕ ಮಂದಿಗೆ ಗಾಯಗಳಾಗಿವೆ.
ನೆದರ್ ಲ್ಯಾಂಡ್ ತಂಡದ ವಿರುದ್ಧ ಯುರೋಪ್ ಲೀಗ್ ಪಂದ್ಯ ನಡೆದ ಬಳಿಕ ರಾತ್ರಿ ಸ್ಟೇಡಿಯಂ ನಿಂದ ಹೊರ ಹೋಗುತ್ತಿದ್ದ ವೇಳೆ ಇಸ್ರೇಲ್ ಪ್ರೇಕ್ಷಕರು ಫೆಲಸ್ತೀನ್ ವಿರುದ್ಧ ಘೋಷಣೆಯನ್ನು ಕೂಗಿದರು ಮತ್ತು ಫೆಲೆಸ್ತೀನ್ ಧ್ವಜವನ್ನು ಹರಿದು ಹಾಕಿದರು. ಮಕ್ಕಾಬಿ ಟೆಲ್ ಅವಿವ್ ಕ್ಲಬ್ ನ ಬೆಂಬಲಿಗರು ಜನಾಂಗೀಯತೆ ಮತ್ತು ಫೆಲಸ್ತೀನಿ ವಿರೋಧಿ ವರ್ತನೆಗೆ ಈ ಮೊದಲೇ ಕುಖ್ಯಾತರಾಗಿದ್ದಾರೆ. ಇಸ್ರೇಲ್ ನಲ್ಲಿ ಜನಾಂಗೀಯ ಫುಟ್ಬಾಲ್ ಕ್ಲಬ್ ಆಗಿ ಮಕ್ಕಾಬಿ ಟೆಲ್ ಅವಿವ್ ಕ್ಲಬ್ ಪರಿಚಿತವಾಗಿದೆ.

ಇದೇ ವೇಳೆ ಇಸ್ರೇಲಿ ವೀಕ್ಷಕರ ಮೇಲೆ ಹಲ್ಲೆ ನಡೆಸಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ನೇತನ್ಯಾಹು ಆಗ್ರಹಿಸಿದ್ದಾರೆ. ಈ ಘರ್ಷಣೆಯಲ್ಲಿ 10 ಮಂದಿ ಇಸ್ರೇಲಿಗರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

 




ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ