ಆಹಾರ ವಿತರಿಸುತ್ತಿದ್ದವರ ಮೇಲೆಯೇ ಬಾಂಬ್ ಹಾಕಿದ ಇಸ್ರೇಲ್: ಗಾಝಾದಲ್ಲಿ ಹಸಿವು ತಾಂಡವ
ಆಹಾರ ವಿತರಿಸುತ್ತಿದ್ದವರ ಮೇಲೆಯೇ ಇಸ್ರೇಲ್ ಬಾಂಬು ಸುರಿಸುತ್ತಿರುವುದನ್ನು ಪರಿಗಣಿಸಿ ಆಹಾರ ವಿತರಣೆಯನ್ನು ನಿಲ್ಲಿಸಲಾಗಿದ್ದು ಇದೀಗ ಗಾಝಾದಲ್ಲಿ ಹಸಿವು ತೀವ್ರವಾಗಿದೆ. ಮುಂದಿನ 48 ಗಂಟೆಗಳ ಕಾಲ ರಾತ್ರಿಯ ಆಹಾರ ವಿತರಣೆಯನ್ನು ನಿಲ್ಲಿಸುವುದಾಗಿ ವಿಶ್ವ ಸಂಸ್ಥೆಯ ಏಜೆನ್ಸಿಗಳು ಹೇಳಿವೆ.
ಯುದ್ಧವು ದ್ವಂಸಗೊಳಿಸಿರುವ ಗಾಝಾದ ಜನರ ಪಾಲಿಗೆ ಸ್ವಯಂಸೇವಾ ಸಂಸ್ಥೆಗಳ ಆಹಾರ ವಿತರಣೆಯೇ ಕೊನೆಯ ನಿರೀಕ್ಷೆಯಾಗಿತ್ತು. ಇದೀಗ ಇವುಗಳು ಕೂಡ ತಮ್ಮ ಸೇವೆಯನ್ನು ನಿಲ್ಲಿಸಿರುವುದರಿಂದ ಗಾಝಾದ ಮಂದಿ ಹಸಿವಿನಿಂದ ಸಾಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ದಿನಗಳ ಹಿಂದೆ ವರ್ಲ್ಡ್ ಸೆಂಟ್ರಲ್ ಕಿಚನ್ ಸಂಘಟನೆಯ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇಸ್ರೇಲ್ ಸೇನೆ ಬಾಂಬ್ ಸುರಿಸಿದ ಬಳಿಕ ಈ ನಿರ್ಧಾರ ತಾಳಲಾಗಿದೆ.
ಇದೇ ವೇಳೆ ಅಮೆರಿಕಾದ ನೇತೃತ್ವದಲ್ಲಿ ಸಮುದ್ರದ ಮೂಲಕ ನಡೆಯುತ್ತಿದ್ದ ಆಹಾರ ವಿತರಣೆಯೂ ಸ್ಥಗಿತಗೊಂಡಿದೆ.
ಗಾಝಕ್ಕೆ ಆಹಾರದೊಂದಿಗೆ ಬಂದ ಹಡಗುಗಳು ಮರಳಿ ಹೋಗಿವೆ ಎಂದು ವರದಿಯಾಗಿದೆ. ಈಗ ಗಾಝಾದ ಸ್ಥಿತಿ ದಯನೀಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದಿನಗಳ ಹಿಂದೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಏಳು ನೆರವು ಕಾರ್ಯಕರ್ತರು ಸಾವಿಗೀಡಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth