ಇರಾನಿನ ಮೇಲೆ ಇಸ್ರೇಲ್ ದಾಳಿ: ಅಮೆರಿಕ ದೃಢ - Mahanayaka
2:07 AM Wednesday 5 - February 2025

ಇರಾನಿನ ಮೇಲೆ ಇಸ್ರೇಲ್ ದಾಳಿ: ಅಮೆರಿಕ ದೃಢ

19/04/2024

ಇರಾನಿನ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಕುರಿತಾದ ವರದಿಯನ್ನು ಅಮೆರಿಕ ದೃಢೀಕರಿಸಿದೆ. ಕಳೆದ ವಾರ ಇಸ್ರೇಲ್ ವಿರುದ್ಧ ಇರಾನ್ ಡ್ರೋಣ್ ಮತ್ತು ಮಿಸೈಲ್ ಮೂಲಕ ದಾಳಿ ನಡೆಸಿತ್ತು. ಮಾತ್ರ ಅಲ್ಲ ಇಸ್ರೇಲ್ ಎಲ್ಲಾದರೂ ಪ್ರತೀಕಾರದ ದಾಳಿಗೆ ಇಳಿದರೆ ತನ್ನ ಪ್ರತ್ಯುತ್ತರ ತೀವ್ರವಾಗಿರುತ್ತದೆ ಎಂದೂ ಎಚ್ಚರಿಸಿತ್ತು.

ಬ್ಯಾಲಿಸ್ಟಿಕ್ ಮಿಸೈಲ್ ಗಳನ್ನು ಬಳಸಿ ಇರಾನಿನ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಅಜ್ಞಾತವಾಗಿ‌ ಉಳಿಬಯಸಿರುವ ಅಮೆರಿಕಾದ ಅಧಿಕಾರಿಗಳ ಮಾಹಿತಿಯನ್ನು ಉಲ್ಲೇಖ ಸಿಬಿಎಸ್ ನ್ಯೂಸ್ ಮತ್ತು ಎಬಿಸಿ ನ್ಯೂಸ್ ಗಳು ವರದಿ ಮಾಡಿವೆ. ಮಧ್ಯ ಇಸ್ವಹಾಂ ಪ್ರದೇಶದಲ್ಲಿ ಸ್ಪೋಟಗಳು ನಡೆದಿರುವುದಾಗಿ ಇರಾನ್ ನ ಅಧಿಕೃತ ಸ್ಟೇಟ್ ಟಿವಿ ದೃಢೀಕರಿಸಿದೆ. ಆದರೆ ಇಲ್ಲಿನ ಅಣ್ವಸ್ತ್ರ ಕೇಂದ್ರಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಕೂಡ ಮಾಹಿತಿ ಇದೆ. ಇಸ್ಫಹಾನ್ ಪ್ರದೇಶದ ಮೇಲೆ ಆಕಾಶದಲ್ಲಿ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ