ಗಾಝಾ ಕದನ ವಿರಾಮ ಒಪ್ಪಂದದ ಕುರಿತು ಚರ್ಚಿಸಲು ಅಮೆರಿಕಕ್ಕೆ ಭೇಟಿ ನೀಡ್ತಾರಂತೆ ಇಸ್ರೇಲ್ ಪ್ರಧಾನಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ವಾಷಿಂಗ್ಟನ್ ಗೆ ಪ್ರಯಾಣಿಸಲಿದ್ದಾರೆ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಫೆಬ್ರವರಿ 4 ರಂದು ಶ್ವೇತಭವನದಲ್ಲಿ ನಡೆಯಲಿರುವ ಸಭೆಗೆ ಟ್ರಂಪ್ ನೆತನ್ಯಾಹು ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗಾಝಾ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಬಗ್ಗೆ ಸಭೆ ಗಮನ ಹರಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ನ್ಯೂಸ್ ವರದಿ ಮಾಡಿದೆ.
ಒಪ್ಪಂದದ ಪ್ರಕಾರ, ಮೊದಲ ಹಂತದಲ್ಲಿ ಜನವರಿ 19 ರಂದು ಆರು ವಾರಗಳ ಕದನ ವಿರಾಮ ಪ್ರಾರಂಭವಾಯಿತು.
ಈ ಕದನ ವಿರಾಮದ 16 ನೇ ದಿನದ ವೇಳೆಗೆ, ಗಾಜಾ ಪಟ್ಟಿಯಲ್ಲಿರುವ ಉಳಿದ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮತ್ತು ಎನ್ಕ್ಲೇವ್ ನಿಂದ ಇಸ್ರೇಲಿ ಪಡೆಗಳನ್ನು ಮತ್ತಷ್ಟು ಹಿಂತೆಗೆದುಕೊಳ್ಳುವ ಗುರಿಯನ್ನು ಹೊಂದಿರುವ ಮುಂದಿನ ಹಂತಗಳ ಬಗ್ಗೆ ಮಾತುಕತೆಗಳು ಪ್ರಾರಂಭವಾಗಲಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj