ಅಮೆರಿಕದಲ್ಲಿ ಇಸ್ರೇಲ್ ಪ್ರಧಾನಿ ಭಾಷಣ: ಹೊರಗಡೆ ಫೆಲೆಸ್ತೀನ್ ಪರ ರ‍್ಯಾಲಿ..!
ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಅಮೆರಿಕನ್ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಿದ್ದಾಗ ಹೊರಗಡೆ ಫೆಲೆಸ್ತೀನ್ ಪರ ರ‍್ಯಾಲಿ ನಡೆದಿದೆ. ಇಸ್ರೇಲ್ ಗೆ ಸೇನಾ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಅಮೇರಿಕವನ್ನು ಸಾವಿರಾರು ಮಂದಿ ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಪ್ಲೇಕಾರ್ಡ್ ಮತ್ತು ಬ್ಯಾನರ್ ಗಳನ್ನು ಹಿಡಿದಿದ್ದರು.
ಫೆಲೆಸ್ತೀನ್ ವಿರುದ್ಧ ನಡೆಸುತ್ತಿರುವ ದಾಳಿಯನ್ನು ಇನ್ನಷ್ಟು ತೀವ್ರ ಗೊಳಿಸುವ ಉದ್ದೇಶದಿಂದ ನೆತನ್ಯಾಹು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಅವರು ಅಮೇರಿಕನ್ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡಲು ಬಂದಿದ್ದರು. ಈ ಭಾಷಣದ ಬಳಿಕ ಅಧ್ಯಕ್ಷ ಬೈಡನ್ ಮತ್ತು ಕಮಲ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಅವರನ್ನು ಕೂಡ ಅವರು ಭೇಟಿ ಮಾಡಲಿದ್ದಾರೆ. ಇದೇ ವೇಳೆ ಅಮೆರಿಕಾದ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಈ ಪ್ರತಿಭಟನಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀವು ಇರಾನ್ ನ ದಾಳಗಳಾಗಿದ್ದೀರಿ ಎಂದು ಕೂಡ ಅವರು ಹೇಳಿದ್ದಾರೆ.
9 ತಿಂಗಳಿನಿಂದ ನಡೆಯುತ್ತಿರುವ ಗಾಜಾದ ಮೇಲಿನ ದಾಳಿಗೆ ಈಗಾಗಲೇ 40,000 ಕ್ಕಿಂತಲೂ ಅಧಿಕ ಫೆಲಿಸ್ತೀನಿ ಯರು ಮೃತಪಟ್ಟಿದ್ದಾರೆ ಮತ್ತು 90 ಸಾವಿರಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth