ಲೆಬನಾನ್ ನಲ್ಲಿ ಇಸ್ರೇಲ್ ದಾಳಿ: 492 ಮಂದಿ ಸಾವು; ಪ್ರತೀಕಾರವಾಗಿ ಹಿಜ್ಬುಲ್ಲಾದಿಂದ 200 ರಾಕೆಟ್ ದಾಳಿ - Mahanayaka
9:24 AM Thursday 12 - December 2024

ಲೆಬನಾನ್ ನಲ್ಲಿ ಇಸ್ರೇಲ್ ದಾಳಿ: 492 ಮಂದಿ ಸಾವು; ಪ್ರತೀಕಾರವಾಗಿ ಹಿಜ್ಬುಲ್ಲಾದಿಂದ 200 ರಾಕೆಟ್ ದಾಳಿ

24/09/2024

2006ರ ಬಳಿಕ ಲೆಬನಾನ್ ನಲ್ಲಿ ನಡೆದ ಭೀಕರ ಯುದ್ಧದಲ್ಲಿ 492 ಮಂದಿ ಮೃತಪಟ್ಟಿದ್ದಾರೆ. ಯಹೂದಿ ರಾಷ್ಟ್ರದ ದಾಳಿಗೆ ಪ್ರತೀಕಾರವಾಗಿ ಲೆಬನಾನ್ ಭಯೋತ್ಪಾದಕ ಗುಂಪು ಉತ್ತರ ಇಸ್ರೇಲ್ ಮೇಲೆ ಸುಮಾರು 200 ರಾಕೆಟ್ ಗಳನ್ನು ಹಾರಿಸಿದೆ.

ಉತ್ತರ ಇಸ್ರೇಲ್ ನ ಹೈಫಾ, ಅಫುಲಾ, ನಜರೆತ್ ಮತ್ತು ಇತರ ನಗರಗಳಲ್ಲಿ ರಾಕೆಟ್ ಸೈರನ್‌ಗಳು ಮೊಳಗಿದವು. ಹಿಜ್ಬುಲ್ಲಾ ರಾತ್ರೋರಾತ್ರಿ ರಾಕೆಟ್ ಗಳ ಸುರಿಮಳೆಯನ್ನು ಪ್ರಾರಂಭಿಸಿತು. ಇರಾನ್ ಬೆಂಬಲಿತ ಗುಂಪು ಹಲವಾರು ಇಸ್ರೇಲಿ ಮಿಲಿಟರಿ ನೆಲೆಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಹೇಳಿದೆ.
ಕಳೆದ ವರ್ಷ ಅಕ್ಟೋಬರ್ 7 ರಂದು ಗಾಝಾ ಸಂಘರ್ಷ ಭುಗಿಲೆದ್ದ ನಂತರ ನಡೆಯುತ್ತಿರುವ ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷವು ಈ ಪ್ರದೇಶದಲ್ಲಿ ಸಂಪೂರ್ಣ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ