ಇರಾನ್ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ನಿಂದ ಪ್ರತೀಕಾರದ ದಾಳಿ

26/10/2024

ಈ ತಿಂಗಳ ಆರಂಭದಲ್ಲಿ ಟೆಹ್ರಾನ್ ನ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಶನಿವಾರ ಬೆಳಿಗ್ಗೆ ಇರಾನಿನ ಮಿಲಿಟರಿ ನೆಲೆಗಳ ಮೇಲೆ ನೇರ ವಾಯುದಾಳಿಯನ್ನು ನಡೆಸಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ತನ್ನ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ದೃಢಪಡಿಸಿದೆ.

ಇಸ್ಲಾಮಿಕ್ ಗಣರಾಜ್ಯದೊಳಗೆ ಇಸ್ರೇಲಿ ಸೇನೆಯು ಮಿಲಿಟರಿ ಕೇಂದ್ರಗಳ ಮೇಲಿನ ದಾಳಿಗಳಲ್ಲಿ ಇರಾನ್ ನ ರಾಜಧಾನಿ ಟೆಹ್ರಾನ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕನಿಷ್ಠ ಮೂರು ಸುತ್ತಿನ ದಾಳಿಗಳನ್ನು ನಡೆಸಲಾಯಿತು.

ಕೆಲವು ಸ್ಥಳಗಳಲ್ಲಿ ಸೀಮಿತ ಹಾನಿ ಕುರಿತು ವರದಿಯಾಗಿದ್ದರೂ, ತನ್ನ ರಕ್ಷಣಾ ವ್ಯವಸ್ಥೆಗಳು ದಾಳಿಯನ್ನು ಯಶಸ್ವಿಯಾಗಿ ಎದುರಿಸಿವೆ ಎಂದು ಇರಾನ್ ಪ್ರತಿಕ್ರಿಯಿಸಿದೆ. ಕೆಲವು ಗಂಟೆಗಳ ನಂತರ, ಇಸ್ರೇಲಿ ಸೇನೆಯು ತನ್ನ ದಾಳಿಗಳನ್ನು ಪೂರ್ಣಗೊಳಿಸಿದೆ ಮತ್ತು ‘ಆಪರೇಷನ್ ಡೇಸ್ ಆಫ್ ರೆಪೆಂಟೆನ್ಸ್’ ಎಂದು ಕರೆಯಲ್ಪಡುವ ತನ್ನ ಉದ್ದೇಶಗಳನ್ನು ಸಾಧಿಸಿದೆ. ಇಸ್ರೇಲ್ ನ ಈ ಅಕ್ರಮಣಕ್ಕೆ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಇರಾನಿನ ಮೂಲವೊಂದು ಎಚ್ಚರಿಕೆ ನೀಡಿದೆ.

ಇಸ್ರೇಲ್ ರಾಷ್ಟ್ರದ ವಿರುದ್ಧ ಇರಾನ್ ನ ಆಡಳಿತದ ತಿಂಗಳುಗಳ ನಿರಂತರ ದಾಳಿಗೆ ಪ್ರತಿಕ್ರಿಯೆಯಾಗಿ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ಪ್ರಾರಂಭಿಸಿದ್ದೇವೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version