ಆಕ್ರೋಶ: ಮತ್ತೆ ಪ್ರತಿಭಟನೆಗಿಳಿದ ಇಸ್ರೇಲ್ ನ ತೀವ್ರ ಸಂಪ್ರದಾಯವಾದಿಯಾದ ಹರೇದಿ ಯಹೂದಿ ವಿಭಾಗ
ಇಸ್ರೇಲ್ ನ ತೀವ್ರ ಸಂಪ್ರದಾಯವಾದಿಯಾದ ಹರೇದಿ ಯಹೂದಿ ವಿಭಾಗವು ಮತ್ತೆ ಪ್ರತಿಭಟನೆಗಿಳಿಗಿದೆ. ಸೈನಿಕ ಸೇವೆ ಕಡ್ಡಾಯ ಎಂಬುದನ್ನು ಈ ವಿಭಾಗವು ವಿರೋಧಿಸುತ್ತಿದೆ. ಈ ಸಮುದಾಯದ ಸಾವಿರ ಪುರುಷರಿಗೆ ಕಡ್ಡಾಯವಾಗಿ ಸೇನೆ ಸೇರಿಕೊಳ್ಳಬೇಕು ಎಂಬ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಸಮುದಾಯ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದೆ.
ಹಲವು ಕಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಟೆಲ್ ಅವಿವ್ ಸಮೀಪದ ನಗರದಲ್ಲಿ ನೂರಾರು ಪ್ರತಿಭಟನಾಕಾರರು ಸೇರಿದರಲ್ಲದೆ ರಸ್ತೆ ಸಂಚಾರವನ್ನು ಬಂದ್ ಮಾಡಿದರು. ಕಡ್ಡಾಯವಾಗಿ ಸೇನೆಗೆ ಸೇರಬೇಕೆಂಬ ಆದೇಶವನ್ನು ರದ್ದುಗೊಳಿಸಬೇಕು ಎಂದು ಇವರು ಆಗ್ರಹಿಸಿದರು. ಈ ಆದೇಶವು ತೋರ ಗ್ರಂಥವನ್ನು ಮತ್ತು ಯಹೂದಿ ಧರ್ಮವನ್ನು ನಾಶಪಡಿಸುವಂತಹದ್ದಾಗಿದೆ, ಇದರ ವಿರುದ್ಧ ನಮಗೆ ಸಾಧ್ಯವಿರುವುದನ್ನೆಲ್ಲ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಿಸಿದರು.
ಈಗಾಗಲೇ ಸಚಿವ ಸಂಪುಟದಿಂದ ಹೊರಹಾಕಲಾಗಿರುವ ಮಾಜಿ ರಕ್ಷಣಾ ಸಚಿವ ಗ್ಯಾಲಟ್ ಅವರು 7,000 ಹರೇದಿ ಯಹೂದಿಯರನ್ನು ಕಡ್ಡಾಯವಾಗಿ ಸೇನೆಗೆ ಸೇರುವಂತೆ ಆದೇಶ ನೀಡಿದ್ದರು. ಇದೀಗ ಅವರ ಪೈಕಿ ಸಾವಿರ ಹರೇದಿ ಯಹೂದಿ ಸಮುದಾಯ ಸೇನೆಗೆ ಸೇರುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj