ರಾಕೆಟ್ ದಾಳಿ: ಇಸ್ರೇಲ್ ನಲ್ಲಿ ಭಾರತೀಯ ಮೂಲದ ಮಹಿಳೆ ಸಾವು
ಜೆರುಸಲೇಮ್: ಇಸ್ರೆಲ್ ಮೇಲೆ ಪ್ಯಾಲೆಸ್ತೀನ್ ರಾಕೆಟ್ ದಾಳಿ ನಡೆಸಿದ ವೇಳೆ ಭಾರತದ ಕೇರಳ ಮೂಲದ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಈ ಹಿನ್ನೆಲ್ಲೆಯಲ್ಲಿ ಮಹಿಳೆಯ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೆಲ್ ಸರ್ಕಾರ ಹೊತ್ತುಕೊಂಡಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ಮೃತಪಟ್ಟವರಾಗಿದ್ದು, ಇವರು ದಕ್ಷಿಣ ಇಸ್ರೆಲ್ ನ ಕರಾವಳಿ ನಗರವಾದ ಅಸ್ಕೆಲೋನ್ ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡಿಕೊಂಡಿದ್ದರು.
ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ದಾಳಿ ನಡೆಸಿದ್ದು, ಈ ವೇಳೆ ಭಾರೀ ಪ್ರಮಾಣದ ಬೆಂಕಿ ಉಂಟಾಗಿದ್ದು, ಈ ವೇಳೆ ಮನೆಯೊಳಗಿದ್ದ ಸೌಮ್ಯಾ ಮೃತಪಟ್ಟಿದ್ದರು.
ಇನ್ನೂ ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಮೃತದೇಹವನ್ನು ಏರ್ ಲೈನ್ಸ್ ಮೂಲಕ ಕೇರಳಕ್ಕೆ ಶುಕ್ರವಾರ ರಾತ್ರಿ ರವಾನೆ ಮಾಡಲಾಗುವುದು ಎಂದು ಇಸ್ರೇಲ್ ಹೇಳಿದೆ. ಜೊತೆಗೆ ಅವರ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ. ಅವರ ಪ್ರಾಣ ನಷ್ಟವನ್ನು ನಮ್ಮಿಂದ ಸರಿ ದೂಗಿಸಲು ಸಾಧ್ಯವಿಲ್ಲವಾದರೂ, ಎಲ್ಲಾ ರೀತಿಯ ಪರಿಹಾರ ನೀಡಲು ಸಿದ್ಧ ಎಂದು ಇಸ್ರೇಲ್ ತಿಳಿಸಿದೆ.
ಇನ್ನೂ ಸೌಮ್ಯಾ ಅವರು ತಮ್ಮ ಪತಿಯೊಂದಿಗೆ 7 ವರ್ಷಗಳಿಂದಲೂ ಇಸ್ರೇಲ್ ನಲ್ಲಿ ವಾಸಿಸುತ್ತಿದ್ದರು. ಇವರಿಗೆ 9 ವರ್ಷದ ಮಗು ಕೂಡ ಇದೆ. ಇದೀಗ ಸೌಮ್ಯಾ ಅವರ ನಿಧನದಿಂದಾಗಿ ಅವರ ಇಡೀ ಕುಟುಂಬವೇ ಕಂಗಾಲಾಗಿದೆ.