ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್‌ ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನ - Mahanayaka
12:14 PM Saturday 21 - September 2024

ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್‌ ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನ

valarmathi
04/09/2023

ಚಂದ್ರಯಾನ 3 ಉಡಾವಣೆ ಸಂದರ್ಭದಲ್ಲಿ ಕೌಂಟ್ ಡೌನ್ ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲಮರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೃದಯಾ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ವಲಮರ್ತಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ತಮ್ಮ ಕೊನೆಯ ದಿನಗಳಲ್ಲಿ ಚಂದ್ರಯಾನ 3 ಯಶಸ್ಸಿನಲ್ಲಿ ಭಾಗಿಯಾಗಿದ್ದರು. ರಾಕೆಟ್ ಲಾಂಚಿಂಗ್ ಸಂದರ್ಭದಲ್ಲಿ ಇವರು ನೀಡುವ ಕೌಂಟ್ ಡೌನ್ ಬಹಳ ಪ್ರಾಮುಖ್ಯದ್ದಾಗಿದೆ.

ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು.


Provided by

ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (LM) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿತು, ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ. ಲ್ಯಾಂಡಿಂಗ್ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಗುರುತು ಹಾಕದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಯಿತು ಈ ಅಪೂರ್ವ ಸಾಧನೆಯಲ್ಲಿ ವಲಮರ್ತಿ ಅವರು ಕೂಡ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ