ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ | ಸಚಿವೆ ಶೋಭಾ ಕರಂದ್ಲಾಜೆ - Mahanayaka
5:45 AM Wednesday 13 - November 2024

ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ | ಸಚಿವೆ ಶೋಭಾ ಕರಂದ್ಲಾಜೆ

shobha karandlaje
20/08/2021

ಮುಂಬೈ: ಅಫ್ಘಾನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಓವೈಸಿ ಅವರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ  ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಓವೈಸಿ, ದೇಶದಲ್ಲಿ ಒಂಬತ್ತು ಹೆಣ್ಣು ಮಕ್ಕಳ ಪೈಕಿ ಒಂದು ಐದು ವರ್ಷಕ್ಕಿಂತ ಮುಂಚಿತವಾಗಿಯೇ ಸಾವನ್ನಪ್ಪುತ್ತಿದೆ ಎಂಬ ವರದಿಯನ್ನೊಂದನ್ನು ಉಲ್ಲೇಖಿಸಿ, ಇಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ, ಅಪರಾಧಗಳು ನಡೆಯುತ್ತಿರುವಾಗ, ಕೇಂದ್ರ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚಿಂತೆ ಮಾಡುತ್ತಿದೆ. ಇಲ್ಲಿ ಅದು ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ್ದರು.

ಓವೈಸಿ ಅವರ ಹೇಳಿಕೆ ಸಂಬಂಧ ಇಂದ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮುಸ್ಲಿಮ್ ಮಹಿಳೆಯರು ಮತ್ತು ಅವರ ಸಮುದಾಯದವರ ರಕ್ಷಣೆಗಾಗಿ ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ ಎಂದು ಹೇಳಿಕೆ ನೀಡಿದರು.

ಇನ್ನಷ್ಟು ಸುದ್ದಿಗಳು…




 

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!

ಕೊವಿಡ್ ಲಸಿಕೆ ಪಡೆದು 20 ದಿನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದಿರಿ!

ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು

ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

ಸಲಿಂಗಿ ಯುವತಿಯರಿಗೆ ಜೊತೆಯಾಗಿ ಬದುಕಲು ಅನುಮತಿ ನೀಡಿದ ನ್ಯಾಯಾಲಯ

ಇತ್ತೀಚಿನ ಸುದ್ದಿ