ವಿಡಿಯೋದಲ್ಲಿರುವುದು ನಾನಲ್ಲ, ಅದೊಂದು ನಕಲಿ ವಿಡಿಯೋ: ಸದಾನಂದ ಗೌಡ ಸ್ಪಷ್ಟನೆ - Mahanayaka
3:15 PM Wednesday 5 - February 2025

ವಿಡಿಯೋದಲ್ಲಿರುವುದು ನಾನಲ್ಲ, ಅದೊಂದು ನಕಲಿ ವಿಡಿಯೋ: ಸದಾನಂದ ಗೌಡ ಸ್ಪಷ್ಟನೆ

sadananda gowda
19/09/2021

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಹೆಸರನ್ನು ಪ್ರಸ್ತಾಪಿಸಿ, ಅಶ್ಲೀಲ ವಿಡಿಯೋವೊಂದನ್ನು ವೈರಲ್ ಮಾಡಲಾಗಿದ್ದು, ಈ ಸಂಬಂಧ ಸದಾನಂದ ಗೌಡ ಅವರು ಪ್ರತಿಕ್ರಿಯಿಸಿದ್ದು, ಈ ವಿಡಿಯೋ ನಕಲಿಯಾಗಿದ್ದು, ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆ ವಿಡಿಯೋದಲ್ಲಿರುವುದು ನಾನಲ್ಲ. ಅದೊಂದು ನಕಲಿ ವಿಡಿಯೋವಾಗಿದ್ದು, ನನ್ನ ವಿರೋಧಿಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಲು ಈ ವಿಡಿಯೋವನ್ನು ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎನ್ನುವ ನಂಬಿಕೆ ನನಗಿದೆ ಎಂದು ಸದಾನಂದ ಗೌಡರು ಹೇಳಿದ್ದಾರೆ.

ಇನ್ನೂ ತಾನು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಪ್ರಕಾರ ಈ ವಿಡಿಯೋವನ್ನು ಫಾರ್ವರ್ಡ್ ಮಾಡುವ ಮತ್ತು ಅಪ್ ಲೋಡ್ ಮಾಡುವ ಯಾರಾದರೂ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಅದೇ ರೀತಿ, ಈ ವಿಡಿಯೋವನ್ನು ಯಾರಾದರೂ ಫಾರ್ವರ್ಡ್ ಮಾಡುತ್ತಿದ್ದರೆ, ನನಗೆ ಇನ್ಸ್ ಬಾಕ್ಸ್ ನಲ್ಲಿ ತಿಳಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಇನ್ನಷ್ಟು ಸುದ್ದಿಗಳು…

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊಲೆ ಬೆದರಿಕೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅರೆಸ್ಟ್

ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ

‘ಕಾರ್ಯಕ್ರಮ ಮುಗಿಯಿತು’: ಮೋದಿ ಜನ್ಮದಿನಾಚರಣೆ ಕೊವಿಡ್ ಲಸಿಕೆ ಬಗ್ಗೆ ರಾಹುಲ್ ಕಿಡಿ

ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!

ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!

ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ!

ಇತ್ತೀಚಿನ ಸುದ್ದಿ