ಒಡಿಶಾ ರೈಲು ದುರಂತ: ಇಸ್ಕಾನ್ ದೇಗುಲವನ್ನು ಮಸೀದಿ ಎಂದು ಫೋಟೋ ಎಡಿಟ್ ಮಾಡಿ ಸುಳ್ಳು ಸೃಷ್ಟಿ..! ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯಿತು ಸತ್ಯ
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಈ ದುರಂತದ ಬೆನ್ನಲ್ಲೇ ಅತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಮಹಾ ದುರಂತ ಸೃಷ್ಟಿ ಮಾಡುವ ಘಟನಾವಳಿಗಳು ನಡಿತಾ ಇದೆ.
ಈ ಭೀಕರ ರೈಲು ಅಪಘಾತ ನಡೆದ ಸ್ವಲ್ಪ ಸಮಯದಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ರೈಲು ಅಪಘಾತ ನಡೆದ ಸ್ಥಳದಲ್ಲಿ ಮಸೀದಿ ಇರುವುದರಿಂದ ಈ ಘಟನೆ ನಡೆದಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೋಮು ದ್ವೇಷದ ಹೇಳಿಕೆಯೊಂದಿಗೆ ಪೋಸ್ಟನ್ನು ಹಂಚಿಕೊಂಡರು.
ಅದರಲ್ಲೂ ವಕ್ತಾರೆ ಶಕುಂತಲ ನಟರಾಜ್ ಎಂಬುವವರು ರೈಲು ದುರಂತದ ಫೋಟೊವನ್ನು ಹಂಚಿಕೊಂಡು ದುರಂತ ನಡೆದ ಸಮೀಪವೇ ಇರುವ ಒಂದು ಧಾರ್ಮಿಕ ಕೇಂದ್ರದ ಚಿತ್ರವನ್ನು ಗುರುತು ಮಾಡಿ ಮಸೀದಿ ಇರುವ ಜಾಗದಲ್ಲಿ ಅಪಘಾತ ನಡೆದಿದೆ ಎಂದು ಚಿತ್ರಿಸಿ ಕೋಮು ವೈಷಮ್ಯದ ಹಿನ್ನಲೆಯಲ್ಲಿ ಪೋಸ್ಟ್ ಹಂಚಿಕೊಂಡರು.
ಇನ್ನು ದಿ ರಾಂಡಮ್ ಇಂಡಿಯಾ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ಜಸ್ಟ್ ಸೇಯಿಂಗ್, ನಿನ್ನೆ ಶುಕ್ರವಾರ” ಎಂದು ಬರೆಯಲಾಗಿದೆ. ಇದನ್ನು ಹೇಳುವ ಮೂಲಕ, ಬಳಕೆದಾರರು ಅಪಘಾತಕ್ಕೆ ಮುಸ್ಲಿಮರು ಹೊಣೆ ಎಂಬ ಅರ್ಥದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.
ರೈಲು ಅಪಘಾತವು ಮುಸ್ಲಿಮರ ಯೋಜಿತ ದಾಳಿ ಎಂಬ ಸುಳ್ಳು ಹೇಳಿಕೆಯೊಂದಿಗೆ ಪೋಸ್ಟನ್ನು ಹಂಚಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೈರಲ್ ಚಿತ್ರದಲ್ಲಿ ಕಂಡುಬರುವ ಗುರುತು ಮಾಡಲಾದ ಧಾರ್ಮಿಕ ಕೇಂದ್ರವು ಮಸೀದಿಯಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ಗುರುತು ಮಾಡಿರುವ ಚಿತ್ರ ದೇವಸ್ಥಾನ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಅಪಘಾತ ನಡೆದ ಸ್ಥಳದಲ್ಲಿ ಹಾಜರಿದ್ದ ಪತ್ರಕರ್ತ ತಮಲ್ ಸಹಾ ಅವರನ್ನು ಆಲ್ಟ್‌ನ್ಯೂಸ್ ತಂಡ ಸಂಪರ್ಕಿಸಿದೆ. ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲಿ ಕಂಡುಬರುವ ರಚನೆಯು ನಿಜವಾಗಿಯೂ ದೇವಾಲಯವಾಗಿದೆ ಎಂದು ಅವರು ಆಲ್ಟ್ ನ್ಯೂಸ್ ಗೆ ಖಚಿತಪಡಿಸಿದ್ದಾರೆ.
ವೈರಲ್ ಪೋಸ್ಟ್‌ನಲ್ಲಿ ಮಸೀದಿ ಎಂದು ಪ್ರತಿಪಾದಿಸಿರುವ ಬಿಳಿ ಬಣ್ಣದ ಕಟ್ಟಡವು ಇಸ್ಕಾನ್ ದೇವಸ್ಥಾನ ಎಂದು ಐದು ತಿಂಗಳ ಹಿಂದೆ ಅಪ್‌ಲೋಡ್ ಮಾಡಲಾದ ದೇವಾಲಯದ ಯೂಟ್ಯೂಬ್ ವೀಡಿಯೊದಲ್ಲಿ ಸ್ಪಷ್ಟವಾಗಿದೆ. ವಿಡಿಯೋವನ್ನು ಅಪ್ ಲೋಡ್ ಮಾಡುವ ಸಂದರ್ಭದಲ್ಲಿ ದೇವಾಲಯದ ನಿರ್ಮಾಣದ ಕೆಲಸ ಪ್ರಗತಿಯಲ್ಲಿರುವುದು ಸ್ಪಷ್ವವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw