ಟರ್ಕಿ ಹಡಗು ಹೈಜಾಕ್: ಇದರ ಹಿಂದಿರುವ ಕಾರಣ ಏನು..?
ಹೈಜಾಕ್ ಆಗಿದ್ದ ಟರ್ಕಿ ಹಡಗನ್ನು ಇಟಾಲಿಯನ್ ವಿಶೇಷ ಸೇನಾ ಪಡೆಯು ತನ್ನ ನಿಯಂತ್ರಣಕ್ಕೆ ಪಡೆದಿದೆ. ಅಕ್ರಮ ವಲಸಿಗರು ಹಡಗನ್ನು ಹೈಜಾಕ್ ಮಾಡಿದ್ದು, ಹಡಗನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಅಂದಹಾಗೇ ಈ ಹಡಗಿನಲ್ಲಿ 22 ಸಿಬ್ಬಂದಿ ಇದ್ದು, ಅವರ ಸುರಕ್ಷತೆಯ ವಿಚಾರವನ್ನು ಶೀಘ್ರದಲ್ಲೇ ದೃಢಪಡಿಸಲಾಗುವುದು ಎಂದು ಇಟಲಿಯ ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ತಿಳಿಸಿದ್ದಾರೆ.
ವಾಹನಗಳನ್ನು ಸಾಗಿಸುವ ಮತ್ತು ನೌಕಾಯಾನದ ಈ ಹಡಗು ಜೂನ್ 7 ರಂದು ಟರ್ಕಿಯ ಟೊಪ್ಯುಲರ್‌ನಿಂದ ಹೊರಟು ದಕ್ಷಿಣ ಫ್ರಾನ್ಸ್ ನ ಸೆಟೆಗೆ ಹೊರಟಿತ್ತು. ಅದನ್ನು ಅಕ್ರಮ ವಲಸಿಗರು ಅಪಹರಿಸಿದ್ದರು. ಹಡಗನ್ನು ಮುಕ್ತಗೊಳಿಸಲು ಇಟಾಲಿಯನ್ ವಿಶೇಷ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw