ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ: ಪ್ರಯಾಣಿಕರ ಅತಿರೇಕದ ವರ್ತನೆಗೆ ಸಿಬ್ಬಂದಿ ಸುಸ್ತು!
ಮುಂಬೈ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಅತಿರೇಕದ ವರ್ತನೆಗಳು ಸಿಬ್ಬಂದಿಗೆ ಇನ್ನಿಲ್ಲದ ಕಾಟ ಕೊಡುತ್ತಿದೆ. ಇತ್ತೀಚೆಗಷ್ಟೆ ಒಂದರ ಹಿಂದೊಂದರಂತೆ ಹಲವು ವಿವಾದಿತ ಘಟನೆಗಳು ವಿಮಾನಗಳಲ್ಲಿ ನಡೆಯುತ್ತಿದೆ.
ಇತ್ತೀಚೆಗಷ್ಟೆ ವಿಮಾನದಲ್ಲಿ ಓರ್ವ ಪ್ರಯಾಣಿಕ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದ. ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆ. ಇದಾದ ಬಳಿಕ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಎಕ್ಸಿಟ್ ತೆರೆದು ಮಕ್ಕಳಾಟಿಕೆ ಆಡಿದ್ದರು. ಇದೀಗ ಮತ್ತೊಮ್ಮೆ ವಿಮಾನದಲ್ಲಿ ಪ್ರಯಾಣಿಕರ ಹುಚ್ಚಾಟ ವರದಿಯಾಗಿದ್ದು, ಮಹಿಳೆಯೊಬ್ಬಳು ವಿಮಾನದಲ್ಲಿ ಅರೆ ಬೆತ್ತಲಾಗಿ ಓಡಾಡಿ ವಿವಾದ ಸೃಷ್ಟಿಸಿದ್ದಾಳೆ.
ವಿಮಾನದಲ್ಲಿ ಅರೆಬೆತ್ತಲೆಯಾಗಿ ಓಡಾಡಿದ್ದಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ 45 ವರ್ಷದ ಇಟಾಲಿಯನ್ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ. ವಿಸ್ತಾರಾ ಅಬುಧಾಬಿ–ಮುಂಬೈ ವಿಮಾನದ ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಅರೆ ಬೆತ್ತಲಾಗಿದ್ದ ಪಾವೊಲಾ ಪೆರುಸಿಯೋ ಎಂಬ ಇಟಾಲಿಯನ್ ಮಹಿಳೆ ಬ್ಯುಸಿನೆಸ್ ಕ್ಲಾಸ್ ಕುಳಿತುಕೊಳ್ಳಲು ಒತ್ತಾಯಿಸಿದರು. ಇದನ್ನು ಪ್ರಶ್ನಿಸಲು ಹೋದ ವಿಮಾನ ಸಿಬ್ಬಂದಿಯೊಬ್ಬರಿಗೆ ಗುದ್ದಿದಲ್ಲದೆ ಮತ್ತೊಬ್ಬ ಸಿಬ್ಬಂದಿ ಮೇಲೆ ಉಗುಳಿ ಅನುಚಿತವಾಗಿ ವರ್ತಿಸಿದ್ದಾರೆ.
ಈ ಕುರಿತಂತೆ ವಿಮಾನ ಸಿಬ್ಬಂದಿಗಳು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮಹಿಳೆಯ ಅನುಚಿತ ವರ್ತನೆ ನಿಲ್ಲಿಸುವಂತೆ ಕ್ಯಾಪ್ಟನ್ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಭದ್ರತಾ ಏಜನ್ಸಿಯವರಿಗೆ ಮಹಿಳೆ ಬಗ್ಗೆ ದೂರು ನೀಡಬೇಕಾಯಿತು ಎಂದು ವಿಮಾನ ಸಿಬ್ಬಂದಿಗಳು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw