ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: 69,100ರೂ. ವೇತನ ಸಿಗಲಿದೆ
ITBP Constable Recruitment 2024: ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಇದ್ದವರಿಗೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ಅವಕಾಶವಿದೆ.
ಭಾರತ ದೇಶಾದ್ಯಂತ ಖಾಲಿ ಇರುವ ಗ್ರೂಪ್ ಸಿ ನಾನ್ ಗೆಜೆಟೆಡ್ ಹುದ್ದೆಗಳಾದ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗಿರುವಂತಹ ಸಂಪೂರ್ಣ ವಿವರವೂ ಇಲ್ಲಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಯ ವಿವರ:
ಐಟಿಬಿಪಿಯ ನೇಮಕಾತಿಯ ನಿಯಮಗಳ ಅನುಸಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು. ಇದರ ಜೊತೆಗೆ ಅರ್ಜಿ ಸಲ್ಲಿಸುವವರು ವಾಹನ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
ವಯೋಮಿತಿ ಅರ್ಹತೆಗಳು ವಿವರ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 27 ವರ್ಷದ ವಯೋಮಿತಿಯಲ್ಲಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಿರಿ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ತಿಂಗಳ ಸಂಬಳ:
ಐಟಿಬಿಪಿ ಪೇ ಸ್ಕೇಲ್ 3ರ ಪ್ರಕಾರ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವೂ ₹21,700ರೂ. ನಿಂದ ₹69,100ರೂ. ವರೆಗೆ ಸಿಗಲಿದೆ.
ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:
ಈ ನೇಮಕಾತಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಇವರನ್ನು ಹೊರತುಪಡಿಸಿ ಉಳಿದ ಆರ್ಗದ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕ ಆನ್ಲೈನ್ ಮೂಲಕ ಪಾವತಿಸಬೇಕು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
* ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ : 08 ಅಕ್ಟೋಬರ್ 2024
* ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುವ ದಿನಾಂಕ : 06 ನವೆಂಬರ್ 2024
ಅರ್ಜಿ ಸಲ್ಲಿಸುವ ಲಿಂಕ್ : recruitment.itbpolice.nic.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: