ಡಬಲ್ ಇಂಜಿನ್ ಬೆಳವಣಿಗೆ ಅಂದ್ರೆ ಇದೇ ಕಣ್ರಿ: ಬೆಂಗಳೂರಿಗರ ಪರಿಸ್ಥಿತಿ ಹೇಳಿದ ಕಾರ್ಟೂನ್
ಬೆಂಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ರಸ್ತೆಗಳು ನದಿಗಳಾಗಿವೆ. ರಸ್ತೆಯಲ್ಲಿ ವಾಹನದಲ್ಲಿ ಹೋಗಬೇಕೋ, ದೋಣಿಯಲ್ಲಿ ಸಂಚರಿಸಬೇಕೋ ಅನ್ನೋದು ತಿಳಿಯದೇ ಜನರು ಕಂಗಾಲಾಗಿದ್ದಾರೆ. ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಂಕಷ್ಟದಲ್ಲಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರದ ನಡೆಯ ಕುರಿತು ವ್ಯಾಪಕ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಇಷ್ಟೊಂದು ಗಂಭೀರ ಸ್ಥಿತಿ ಬೆಂಗಳೂರಿನಲ್ಲಿದ್ದರೂ, ಜನಪ್ರತಿನಿಧಿಗಳು ಉದಾಸೀನ ತಾಳುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿವೆ.
ಬೆಂಗಳೂರು ಜಲದಿಗ್ಬಂಧನಕ್ಕೀಡಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗಳು ಕೂಡ ಕಂಡು ಬಂದಿವೆ. ನಿನ್ನೆಯಷ್ಟೇ ಸಂಸದ ತೇಜಸ್ವಿ ಸೂರ್ಯ ಬೆಣ್ಣೆ ದೋಸೆ ತಿಂದು ನೆಟ್ಟಿಗರ ಕೆಂಗಣ್ಣಿಗೆ ಸಿಲುಕಿದ್ದರು. ಇದೀಗ ಡಬಲ್ ಇಂಜಿನ್ ಸರ್ಕಾರ ಎಂಬ ಪದಕ್ಕೆ ವ್ಯಂಗ್ಯಾರ್ಥವನ್ನೂ ನೀಡಿರುವ ಕಾರ್ಟೂನ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆ ಪೂರ್ತಿ ನೀರು ನಿಂತಿದ್ದು, ನೀರು ಮತ್ತು ರಸ್ತೆಯಲ್ಲಿ ಏಕಕಾಲಕ್ಕೆ ಪ್ರಯಾಣಿಸುವುದನ್ನು ಡಬಲ್ ಇಂಜಿನ್ ಅಂತ ಕರೆಯುತ್ತಾರೆ ಎನ್ನುವಂತಹ ಟ್ರೋಲ್ ಗಳು ಇದೀಗ ಸರ್ಕಾರವನ್ನು ವ್ಯಂಗ್ಯವಾಡಿವೆ. ನೀರು ತುಂಬಿದ ರಸ್ತೆಯಲ್ಲಿ ನಿಂತು ವಾಹನ ಚಾಲಕರು “ ಡಬಲ್ ಇಂಜಿನ್ ಬೆಳವಣಿಗೆ ಅಂದ್ರೆ ಇದೇ ಕಣ್ರಿ” ಎಂದು ಮಾತುನಾಡುತ್ತಿರುವ ವ್ಯಂಗ್ಯ ಚಿತ್ರ ಬೆಂಗಳೂರಿನ ಜನರ ಮನಸ್ಸಿನ ಭಾವನೆಯನ್ನು ಹೊರ ಹಾಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka