ಹೊಸ ಪ್ರಯೋಗ: ದುಬೈನಲ್ಲಿ ಇನ್ಮುಂದೆ ಓಡಾಡುತ್ತೆ ಎಲೆಕ್ಟ್ರಿಕ್ ರೈಲು, ಬಸ್ಸುಗಳು!

ಹೊಸ ಪ್ರಯೋಗಗಳಿಗೆಲ್ಲ ತನ್ನನ್ನೇ ಮೊದಲಾಗಿ ಒಡ್ಡಿಕೊಳ್ಳುವುದು ದುಬೈಯ ವಿಶೇಷತೆ. ಮೆಟ್ರೋ ಮತ್ತು ಟ್ರಾಂ ಗಳ ಬಳಿಕ ಇದೀಗ ಸ್ವಯಂ ನಿಯಂತ್ರಣದ ಎಲೆಕ್ಟ್ರಿಕ್ ರೈಲು, ಬಸ್ಸುಗಳನ್ನು ಪರಿಚಯಿಸಲು ದುಬೈ ಸಿದ್ಧವಾಗಿದೆ. ಮದೀನ ತುಲ್ ಜುಮೇರಾದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ದುಬೈ ರೋಡ್ ಅಥಾರಿಟಿಯು ಈ ಹೊಸ ಯೋಜನೆಯನ್ನು ಪರಿಚಯಿಸಿದೆ.
ಪುನರ್ ಬಳಕೆ ವಸ್ತುಗಳನ್ನು ಉಪಯೋಗಿಸಿ ಸಂಪೂರ್ಣ ತ್ರೀಡಿ ಪ್ರಿಂಟೆಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಿರುವ ಈ ರೈಲ್ ಬಸ್ ಸಂಪೂರ್ಣವಾಗಿ ಪರಿಸರ ಸ್ನೇಹಿರುತ್ತದೆ ಎಂದು ತಿಳಿಸಲಾಗಿದೆ. ಈ ಬಸ್ಸು ಸಂಪೂರ್ಣ ಸೌರ ವಿದ್ಯುತ್ ನಿಂದ ಸಂಚರಿಸಲಿದ್ದು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲಿದೆ.ಒಂದೊಂದು ಕಂಪಾರ್ಟ್ಮೆಂಟ್ ನಲ್ಲಿ 22 ಸೀಟುಗಳಿರುತ್ತವೆ. ಹೀಗೆ ಒಂದೇ ಸಮಯದಲ್ಲಿ 40 ಮಂದಿಗೆ ಪ್ರಯಾಣಿಸಬಹುದು. ಬಸ್ಸಿನ ಒಳಗಡೆ ಅಳವಡಿಸಿರುವ ಸ್ಕ್ರೀನ್‌ನಲ್ಲಿ ಪ್ರಯಾಣದ ಸಂಪೂರ್ಣ ವಿವರಗಳು ಮೂಡಿ ಬರಲಿವೆ. ಜಗತ್ತಿನ ಅತ್ಯಂತ ಸ್ಮಾರ್ಟ್ ನಗರವಾಗಿ ಬೆಳೆಯುತ್ತಿರುವ ದುಬೈಗೆ ಈ ರೈಲು, ಬಸ್ಸುಗಳು ಕಿರೀಟದಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj