ಹಮಾಸ್ ನಡೆಸಿದ ಆಕ್ರಮಣವನ್ನ ತಡೆಯಲು ನಾವು ವಿಫಲವಾಗಿರುವುದು ನಿಜ: ಇಸ್ರೇಲ್ ಸೇನೆಯ ತನಿಖಾ ವರದಿಯಲ್ಲಿ ಬಹಿರಂಗ

ಇಸ್ರೇಲ್ ನ ಒಳಗೆ ನುಗ್ಗಿ 2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಆಕ್ರಮಣವನ್ನ ತಡೆಯಲು ನಾವು ವಿಫಲವಾಗಿರುವುದು ನಿಜ ಎಂದು ಇಸ್ರೇಲ್ ಸೇನೆಯ ತನಿಖಾ ವರದಿಯು ಹೇಳಿದೆ. ಹಮಾಸ್ ನ ಈ ಮಿಂಚಿನ ಆಕ್ರಮಣವನ್ನು ಇಸ್ರೇಲ್ ಸೇನೆ ನಿರೀಕ್ಷಿಸಿರಲಿಲ್ಲ, ಹಾಗೆ ಯೇ ಹಮಾಸ್ ನ ಶಕ್ತಿಯನ್ನು ನಾವು ಕೀಳಂದಾಜಿಸಿದ್ದೆವು ಎಂದು ಸೇನೆಯ ಆಂತರಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಯುದ್ಧ ಮಾಡುವುದಕ್ಕಿಂತ ಗಾಝಾವನ್ನು ಆಳುವುದೇ ಹಮಾಸ್ ನ ಉದ್ದೇಶ ಎಂದು ಅಂದುಕೊಳ್ಳಲಾಗಿತ್ತು. ಒಂದು ವೇಳೆ ಇಸ್ರೇಲ್ ಮೇಲೆ ಆಕ್ರಮಣ ನಡೆಸುವುದೇ ಆದರೆ 8 ಕೇಂದ್ರಗಳಿಂದ ಮಾತ್ರವೇ ಹಮಾಸ್ ಗೆ ಸಾಧ್ಯ ಎಂದು ನಂಬಲಾಗಿತ್ತು. ಆದರೆ ಗಡಿಯನ್ನು ದಾಟಿ 60 ಕ್ಕಿಂತಲೂ ಅಧಿಕ ದಾರಿಗಳ ಮೂಲಕ ಇಸ್ರೇಲ್ ಮೇಲೆ ಆಕ್ರಮ ನಡೆಸಲು ಹಮಾಸ್ ಗೆ ಸಾಧ್ಯವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ
ಹಮಾಸ್ ಮುಖಂಡ ಯಹ್ಯಾಸಿನ್ವಾರ್ ಅವರ ನೇತೃತ್ವದಲ್ಲಿ ಇಸ್ರೇಲ್ ಮೇಲೆ 2017ರಲ್ಲಿ ಆಕ್ರಮಣ ನಡೆಸಲು ಯೋಜನೆಯನ್ನು ರೂಪಿಸಲಾಗಿತ್ತು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
2023ಕ್ಕಿಂತ ಮೊದಲೇ ಮೂರು ಬಾರಿ ಇಸ್ರೇಲ್ ನ ಮೇಲೆ ದಾಳಿ ನಡೆಸಲು ಹಮಾಸ್ ಮುಂದಾಗಿತ್ತು. ಆದರೆ ಅಜ್ಞಾತ ಕಾರಣಗಳಿಂದಾಗಿ ಅದು ಜಾರಿಗೆ ಬಂದಿರ್ಲಿಲ್ಲ ಎಂದು ಕೂಡ ವರದಿ ತಿಳಿಸಿದೆ
ಸಾವಿರಕ್ಕಿಂತಲೂ ಅಧಿಕ ಹಮಾಸ್ ಕಾರ್ಯಕರ್ತರು ಇಸ್ರೇಲ್ ಗಡಿಯನ್ನು ದಾಟಿ ರಾಕೆಟ್ಗಳನ್ನು ಹಾರಿಸಿ ದಾಳಿ ನಡೆಸಿದಾಗ ಸೇನೆ ಆಘಾತಕ್ಕೆ ಒಳಗಾಗಿತ್ತು. ಕ್ಯಾಮರಾಗಳು ಕೆಲಸ ಮಾಡದಂತೆ ನೋಡಿಕೊಂಡ ಹಮಾಸ್ ಯೋಧರು ಗಡಿಯಲ್ಲಿ ಕಾವಲಿದ್ದ ನೂರಾರು ಯೋಧರನ್ನು ತಕ್ಷಣ ಶರಣಾಗುವಂತೆ ಮಾಡಿಕೊಂಡರು ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲಿಂದ ಅವರು ಹೈವೇಗಳು, ಗಡಿ ಪ್ರದೇಶಗಳು, ಸಂಗೀತ ಕಾರ್ಯಕ್ರಮಗಳು ಮಾತ್ರ ಅಲ್ಲ ಜನಕೇಂದ್ರಿತ ಸ್ಥಳಗಳಿಗೆ ಹೋದರಲ್ಲದೆ ಉನ್ನತ ಅಧಿಕಾರಿಗಳ ಮೇಲೆ ಆಕ್ರಮಣ ನಡೆಸಿ ಸೇನಾ ಕಮಾಂಡ್ ಕಂಟ್ರೋಲ್ ವ್ಯವಸ್ಥೆಯನ್ನು ತಾರು ಮಾರು ಮಾಡಿದರು. ಆಕ್ರಮಣದ ಮೊದಲ ಮೂರು ಗಂಟೆಯಲ್ಲಿ ಇಸ್ರೇಲ್ ಸೇನೆಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ ಮತ್ತು ಈ ಸಂದರ್ಭದಲ್ಲಿ 250 ಕ್ಕಿಂತ ಅಧಿಕ ಮಂದಿಯನ್ನು ಅವರು ಬಂಧಿಸಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಸ್ರೇಲ್ ಇತಿಹಾಸದಲ್ಲಿ ಅತ್ಯಂತ ದುರಂತ ದಿನವಾಗಿ ಅಕ್ಟೋಬರ್ ಏಳು 2023 ರನ್ನು ಪರಿಗಣಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj