ಐವನ್ ಡಿಸೋಜ ಮನೆಗೆ ನುಗ್ಗಲು ಬಜರಂಗದಳದ ಕಾರ್ಯಕರ್ತರಿಂದ ಯತ್ನ: 8 ಮಂದಿ ಅರೆಸ್ಟ್
ಮಂಗಳೂರು: ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳದ ಕಾರ್ಯಕರ್ತರು ನುಗ್ಗಲು ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 8 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಕೇಸರಿ ಬಟ್ಟೆ ಹಾಕಿ ಬಜರಂಗದಳದವರು ಅನೈತಿಕ ವರ್ತನೆ ಮಾಡುತ್ತಾರೆ, ಸುಲಿಗೆ ಮಾಡುತ್ತಿದ್ದಾರೆ, ಸಮಾಜದ್ರೋಹಿಗಳು ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬಜರಂಗದಳದ ಕಾರ್ಯಕರ್ತರು ಐವನ್ ಡಿಸೋಜ ಮನೆಗೆ ನುಗ್ಗಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಮುತ್ತಿಗೆ ಯತ್ನ ವೇಳೆ ಐವನ್ ಡಿಸೋಜ ಅವರು ತಮ್ಮ ಮನೆಯಲ್ಲಿರಲಿಲ್ಲ ಎಂದು ಹೇಳಲಾಗಿದೆ ಅವರು ಸದ್ಯ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆನ್ನಲಾಗಿದೆ. ಇನ್ನೂ ಐವನ್ ಡಿಸೋಜ ಮನೆಗೆ ಬಜರಂಗದಳದ ಮುತ್ತಿಗೆಯನ್ನು ಮಂಗಳೂರು ದಕ್ಷಿಣ ಪೊಲೀಸರು ವಿಫಲಗೊಳಿಸಿ, ಎಂಟು ಮಂದಿ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ರೋಗಿಯ ಕಿಡ್ನಿಯ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ!
65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!
ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್
ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ: ಸಿಎಂ ಬಸವರಾಜ್ ಬೊಮ್ಮಾಯಿ
ನಿಮ್ಮ ಮೆಚ್ಚಿನ ಮಹಾನಾಯಕ ಮಾಧ್ಯಮಕ್ಕೆ 1 ವರ್ಷದ ಸಂಭ್ರಮ
ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ | ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು