10:57 AM Wednesday 12 - March 2025

ಐವಾನ್ ಡಿಸೋಜಾ ಮನೆಯಿಂದಲೇ ಮತಾಂತರ ಆರಂಭವಾಗಿದೆ | ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ

rajashekharananda swamy
21/10/2021

ಮಂಗಳೂರು: ಐವಾನ್ ಡಿಸೋಜಾ ಯಾರನ್ನು ಮದುವೆಯಾಗಿದ್ದಾರೆ? ಯಾರ ಜೊತೆಗೆ ಸಂಸಾರ ಮಾಡುತ್ತಿದ್ದಾರೆ ಎನ್ನುವುದನ್ನು ಮೊದಲು ನೋಡಲಿ. ಅವರು ಕೇಸರಿ ಧರ್ಮದ ಹೆಣ್ಣನ್ನು ಮದುವೆಯಾಗಿದ್ದಾರೆ. ಮತಾಂತರ ಅಲ್ಲಿಂದಲೇ ಆರಂಭವಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನ ವಿಎಚ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಮಾಜಘಾತುಕ ಶಕ್ತಿಗಳು ಮಾತ್ರವೇ ಕೇಸರಿ ಬಟ್ಟೆ ಧರಿಸುತ್ತಾರೆ ಎಂದು ಬಿಜೆಪಿ ಪರಿವಾರದ ವಿರುದ್ಧ ಐವಾನ್ ಡಿಸೋಜಾ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋಹನದಾಸ ಸ್ವಾಮೀಜಿ, ಖಾವಿ ಸಂಯೋಚಿತವಾಗಿ ಕೆಲಸ ಮಾಡುತ್ತದೆ. ಕೇಸರಿ ಕೇವಲ ತ್ಯಾಗದ ಸಂಕೇತ ಮಾತ್ರವಲ್ಲ. ಶಾಂತಿ, ಸೌಜನ್ಯ, ದಯೆ, ಧರ್ಮದ ಸಂಕೇತ. ಪ್ರತಿ ಬಣ್ಣವೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಕೇಸರಿ ಬಗ್ಗೆ ಐವಾನ್ ಡಿಸೋಜಾ ಈ ರೀತಿ ಹೇಳಿಕೆಯನ್ನು ನೀಡಿರೋದು ತಪ್ಪು ಎಂದು ಹೇಳಿದರು.

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಐವಾನ್ ಡಿಸೋಜಾ, ಬಜರಂಗದಳದ ಕಾರ್ಯಕರ್ತರು ಕೇಸರಿ ಹಾಕಿಕೊಂಡು ಅನೈತಿಕ ಪೊಲೀಸ್ ಗಿರಿ, ಹಲ್ಲೆ ಸೇರಿದಂತೆ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೇಸರಿ ಬಣ್ಣದ ವಸ್ತ್ರ ಧರಿಸುವವರು ಸಮಾಜಘಾತುಕರು ಎಂಬಂತಾಗಿದೆ(ಎಂದು ನೋಡುವಂತಾಗಿದೆ) ಎಂದು ಹೇಳಿದ್ದರು. ಇದೀಗ ರಾಜಕೀಯ ವಿಚಾರಕ್ಕೆ ಸ್ವಾಮೀಜಿಗಳು ಕೂಡ ಎಂಟ್ರಿ ಕೊಟ್ಟಿರುವುದರಿಂದ ಈ ವಿಚಾರ ತಿರುವು ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಜಾನುವಾರುಗಳಿಗೆ ಆಸರೆಯಾಗಿದ್ದ ಸಬ್ ಇನ್ ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ

ವಿದ್ಯಾರ್ಥಿಯ ಜೊತೆಗಿನ ಒಡನಾಟದಿಂದ ಪ್ರಾಣ ಕಳೆದುಕೊಂಡ ಗೃಹಿಣಿ!

ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರದ್ದೇ ದೊಡ್ಡಪಾಲು | ಪ್ರಿಯಾಂಕ್ ಖರ್ಗೆ

ಬಂಧಿಸಲು ಹೋದ ಪೊಲೀಸರಿಗೆ ತಲ್ವಾರ್ ತೋರಿಸಿ ಪರಾರಿಯಾದ ರೌಡಿಶೀಟರ್!

ಅಫ್ಘಾನಿಸ್ತಾನ: ವಾಲಿಬಾಲ್ ಆಟಗಾರ್ತಿಯ ಶಿರಚ್ಚೇದನ ನಡೆಸಿದ ತಾಲಿಬಾನಿಗಳು

65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!

“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ಎಂಬ ನಳಿನ್ ಹೇಳಿಕೆ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ

ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್

ಇತ್ತೀಚಿನ ಸುದ್ದಿ

Exit mobile version