ಅಣ್ಣನನ್ನು ಕೊಲೆಗೈದ ತಮ್ಮ: ಜಾಗದ ತಕರಾರು ಕೊಲೆಯಲ್ಲಿ ಅಂತ್ಯ
ಜಾಗದ ವಿಚಾರವಾಗಿ ಅಣ್ಣನನ್ನು ತಮ್ಮನೇ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದ್ದು, ಹಲವು ಸಮಯಗಳಿಂದ ಇದ್ದ ಜಾಗದ ತಕರಾರು ಕೊಲೆಯಲ್ಲಿ ಅಂತ್ಯವಾಗಿದೆ.
ವಿಟ್ಲ ಸಮೀಪದ ಕೊಡಂಗೆ ಎಂಬಲ್ಲಿ ಈ ಘಟನೆ ನಡೆದಿದ್ದು, ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಕೊಲೆಯಾದವರು. ಅವರ ತಮ್ಮ ಪದ್ಮನಾಭ (49) ಕೊಲೆ ಆರೋಪಿ.
ಅಣ್ಣ ತಮ್ಮಂದಿರ ನಡುವೆ ಜಾಗದ ವಿಚಾರವಾಗಿ ಹಲವು ಸಮಯದಿಂದ ತಕರಾರು ನಡೆಯುತ್ತಿತ್ತು. ಕುಡಿತದ ಚಟ ಹೊಂದಿರುವ ಇವರಿಬ್ಬರ ಮಧ್ಯೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಅಲ್ಲದೇ ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ರಾತ್ರಿಯೂ ಇವರೊಳಗೆ ನಡೆದ ಗಲಾಟೆಯಲ್ಲಿ ಗಣೇಶ ಕೊಲೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka