ರಾಜ್ಯಸಭೆ ಕಲಾಪ ನಡೆಸುವ ಸಮಿತಿ ಪುನರ್ ರಚನೆ: ಮಹಿಳಾ ಸದಸ್ಯರಿಗೆ ಆದ್ಯತೆ - Mahanayaka
3:01 AM Friday 20 - September 2024

ರಾಜ್ಯಸಭೆ ಕಲಾಪ ನಡೆಸುವ ಸಮಿತಿ ಪುನರ್ ರಚನೆ: ಮಹಿಳಾ ಸದಸ್ಯರಿಗೆ ಆದ್ಯತೆ

20/07/2023

ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಅವರ ಅನುಪಸ್ಥಿತಿಯಲ್ಲಿ ಕಲಾಪ ನಡೆಸುವ ಸದಸ್ಯರ ಸಮಿತಿಯನ್ನು ಗುರುವಾರ ಪುನರ್ ರಚಿಸಲಾಗಿದೆ.

ನೂತನ ಮಂಡಳಿಯಲ್ಲಿ ಶೇಕಡಾ 50 ರಷ್ಟು ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗಿದೆ. ಜುಲೈ 17, 2023 ರಿಂದ ಜಾರಿಗೆ ಬರುವಂತೆ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಸಭಾಪತಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಸದಸ್ಯರಿಗೆ ತಿಳಿಸಿದ್ದಾರೆ.

ಪಿ.ಟಿ.ಉಷಾ, ಎಸ್.ಫಂಗ್ನಾನ್ ಕೊನ್ಯಾಕ್, ಫೌಜಿಯಾ ಖಾನ್, ಸುಲ್ತಾನ್ ದಿಯೋ, ವಿ.ವಿಜಯಸಾಯಿ ರೆಡ್ಡಿ, ಘನಶ್ಯಾಮ್ ತಿವಾರಿ, ಎಲ್.ಹನುಮಂತಯ್ಯ ಮತ್ತು ಸುಖೇಂದು ಶೇಖರ್ ರೇ ಅವರು ಪುನರ್ ರಚನೆಯಾಗಿರುವ ಮಂಡಳಿಯಲ್ಲಿದ್ದಾರೆ.


Provided by

ಶೇಕಡಾ 50 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಿರುವುದು ಸದಸ್ಯರಿಗೆ ಸಂತಸವನ್ನುಂಟು ಮಾಡಲಿದೆ ಎಂದು ಸಭಾಪತಿ ಹೇಳಿದ್ದಾರೆ.
ನೂತನ ಮಂಡಳಿ ಮತ್ತೆ ಹೊಸ ಮಂಡಳಿ ರಚಿಸುವವರೆಗೂ ಇವರೆಲ್ಲರೂ ತಮ್ಮ ಕರ್ತವ್ಯದ ಅವಧಿ ಹೊಂದಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ