ಜಗ್ಗೇಶ್ ಒಬ್ಬ ಅಯೋಗ್ಯ, ರಾಜ್ಯ ಸಭಾ ಸದಸ್ಯನಾಗುವ ಯೋಗ್ಯತೆ ಇಲ್ಲ: ಎಂ.ಬಿ.ಪಾಟೀಲ್ ಕಿಡಿ
ಚಿತ್ರದುರ್ಗ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ ಹೆಣ ಬೀಳುತ್ತದೆ. ಅದಕ್ಕೆ ಅವಕಾಶ ಕೊಡಲ್ಲ ಎಂಬಂತಹ ಹೇಳಿಕೆ ನೀಡಿದ್ದ ರಾಜ್ಯ ಸಭಾ ಸದಸ್ಯ ಜಗ್ಗೇಶ್ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದು, ‘ಜಗ್ಗೇಶ್ ಒಬ್ಬ ಅಯೋಗ್ಯ’ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜಗ್ಗೇಶ್ ಹೆಣ ಬೀಳುತ್ತೆ ಅಂದಿದ್ದಾರೆ. ಅಧಿಕಾರದಲ್ಲಿರೋದು ಅವರದ್ದೇ ಪಕ್ಷ. ಅಮಾಯಕರ ಹೆಣ ಬೀಳುತ್ತಿರುವುದು ಬಿಜೆಪಿ ಸರ್ಕಾರದಲ್ಲಿ, ಇದಕ್ಕೆ ಹೊಣೆ ಸರ್ಕಾರ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆ ಮಾಡಬೇಕಿರುವುದು ಸರ್ಕಾರ ಎಂಬ ಅರಿವು ಜಗ್ಗೇಶ್ ಗೆ ಇಲ್ಲವೇ? ಎಂದು ಪ್ರಶ್ನಿಸಿದ ಎಂ.ಬಿ.ಪಾಟೀಲ್, ಇಷ್ಟೂ ಅರಿವು ಇಲ್ಲದ ಜಗ್ಗೇಶ್ ರಾಜ್ಯ ಸಭಾ ಸದಸ್ಯ ಹೇಗಾದ್ರು? ಎಂದು ಪ್ರಶ್ನಿಸಿದರು.
ಜಗ್ಗೇಶ್ ಅವರಿಗೆ ರಾಜ್ಯ ಸಭಾ ಸದಸ್ಯ ಆಗುವ ಯೋಗ್ಯತೆ ಇಲ್ಲ. ಜಗ್ಗೇಶ್ ಒಬ್ಬ ಅಯೋಗ್ಯ. ಸಿದ್ದರಾಮಯ್ಯ ರಾಜ್ಯದ ಪ್ರಭಾವಿ ರಾಜಕಾರಣಿ, ಸಿದ್ದರಾಮಯ್ಯ ಬೆರಳು ತೋರಿಸಿ ಏನಾದ್ರು ಹೇಳಿದ್ರೆ ಇವರ್ಯಾರೂ ಮನೆ ಬಿಟ್ಟು ಹೊರಗೆ ಬರಲು ಸಾಧ್ಯವಿಲ್ಲ, ಆದರೆ ಸಿದ್ದರಾಮಯ್ಯನವರು ಆ ರೀತಿ ಮಾಡುವುದಿಲ್ಲ. ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka