ಹಿಂದೂಗಳು ಎದ್ದು ನಿಂತರೆ ಹೇಳೋಕೆ ಹೆಸರಿಲ್ಲದಂತೆ ಮಾಡಿಬಿಡ್ತಾರೆ: ಸತೀಶ್ ಜಾರಕಿಹೊಳಿಗೆ ಜಗ್ಗೇಶ್ ಎಚ್ಚರಿಕೆ - Mahanayaka
5:00 PM Thursday 12 - December 2024

ಹಿಂದೂಗಳು ಎದ್ದು ನಿಂತರೆ ಹೇಳೋಕೆ ಹೆಸರಿಲ್ಲದಂತೆ ಮಾಡಿಬಿಡ್ತಾರೆ: ಸತೀಶ್ ಜಾರಕಿಹೊಳಿಗೆ ಜಗ್ಗೇಶ್ ಎಚ್ಚರಿಕೆ

jaggesh
10/11/2022

ಬೆಂಗಳೂರು: ಹಿಂದೂಗಳು ಎದ್ದು ನಿಂತರು ಅಂದರೆ ನಿಮಗೆ ಹೇಳೋಕೆ ಹೆಸರು ಇಲ್ಲದಂಗೆ ಮಾಡಿಬಿಡ್ತಾರೆ ಎಂದು ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಸತೀಶ್ ಜಾರಕಿಹೊಳಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಧರ್ಮ ಅನ್ನೋದು ಭಾರತೀಯ ಪದವಲ್ಲ ಪರ್ಷಿಯನ್ ಪದ, ಪರ್ಷಿಯನ್ ಭಾಷೆಯಲ್ಲಿ ಇದು ಅಶ್ಲೀಲ ಅರ್ಥವನ್ನು ಹೊಂದಿದೆ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಜಗ್ಗೇಶ್ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು ಎಂದು ಹರಿಹಾಯ್ದಿದ್ದಾರೆ.

ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ,  ‘ಅವರು ಹಿಂದೂ ಸಂಸ್ಕೃತಿ ಒಪ್ಪದಿದ್ದರೂ ಮಾಟ, ಮಂತ್ರ ಮಾಡುವವರು ಆಗಿರಬೇಕು. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಅವರು ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಜವಾಗಿಯೂ ಹಿಂದೂ ಎಂದು ಹೆಮ್ಮೆ ಇಟ್ಟುಕೊಂಡಿರುವವರು ನಿಮ್ಮನ್ನ ಕ್ಷಮಿಸಿಲ್ಲ. ನಮ್ಮ ಹಿಂದೂಗಳು ಸಾಧ್ವಿಗಳು. ಕ್ಷಮಾಗುಣ ದೊಡ್ಡಮಟ್ಟದಲ್ಲಿದೆ. ಅವರು ನಿಮ್ಮನ್ನ ಪದೇ ಪದೆ ಕ್ಷಮಿಸಿದ್ದಾರೆ ಎಂದು ಮಾತನಾಡಲು ಹೋಗಬೇಡಿ. ಅವರು ಎದ್ದು ನಿಂತರು ಅಂದರೆ ನಿಮಗೆ ಹೇಳೋಕೆ ಹೆಸರು ಇಲ್ಲದಂಗೆ ಮಾಡಿಬಿಡ್ತಾರೆ. ಅಷ್ಟು ತಾಕತ್ತು ಹಿಂದೂ ಧರ್ಮಕ್ಕೆ ಇದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ