ಜಗ್ಗೇಶ್ ಗೆ ತಿರುಗೇಟು: “ನಿಮ್ಮನ್ನೆಲ್ಲ ರಂಜಿಸಿದ್ದಕ್ಕೆ ಇದೇನಾ ಉಡುಗೊರೆ” ಎಂಬ ಡೈಲಾಗ್ ಗೆ ನಟ ಚೇತನ್ ತಿರುಗೇಟು
ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಜಗ್ಗೇಶ್ ಮನೆ ರೈಡ್ ಮಾಡಿದ್ದ ಅರಣ್ಯಾಧಿಕಾರಿಗಳು ಜಗ್ಗೇಶ್ ಬಳಿಯಿದ್ದ ಹುಲಿ ಉಗುರಿನ ಪೆಂಡೆಂಟ್ ನ್ನು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ಹುಲಿ ಉಗುರಿನ ಪೆಂಡೆಂಟ್ ಅರಣ್ಯಾಧಿಕಾರಿಗಳ ಪಾಲಾಗಿರೋದಕ್ಕೆ ತೀವ್ರ ಬೇಸರ ಮಾಡಿಕೊಂಡಿದ್ದರು.
ಜಗ್ಗೇಶ್ ಬಳಿಯಲ್ಲೂ ಹುಲಿ ಉಗುರು ಇರುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕು ಎಂದಿದ್ದರು. ಇದರ ಬಗ್ಗೆ ಅಸಹನೆಯೋ, ಬೇಸರವೋ ಎಂಬಂತೆ ನಟ ಜಗ್ಗೇಶ್, ನಿಮ್ಮನ್ನು ರಂಜಿಸಿದ್ದಕ್ಕೆ ನೀಡುವ ಉಡುಗೊರೆ ಇದೇನಾ ಎಂದಿದ್ದರು. ಜಗ್ಗೇಶ್ ಅವರ ಹೇಳಿಕೆಗೆ ಇದೀಗ ಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.
‘ಹುಲಿ ಉಗುರು’ ಸಮಸ್ಯೆಯ ಬೆಳಕಿನಲ್ಲಿ, ಈಗ ನಟ ಜಗ್ಗೇಶ್ ಹೇಳುತ್ತಾರೆ:’ನಿಮ್ಮನ್ನ ರಂಜಿಸಿದ್ದಕ್ಕೆ ನೀಡುವ ಉಡುಗೊರೆ ಇದೇನಾ?’ ಇದು ಸ್ಟಾರ್ ಸಂಸ್ಕೃತಿಯ ಪ್ಯಾರಡಾಕ್ಸ್ ಆಗಿದೆ: ನಾಯಕ ನಟರು/ನಟಿಯರು ತಮ್ಮ ಕೆಲಸಕ್ಕಾಗಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಮತ್ತು ಹೆಚ್ಚಿನ ಬಿಲ್ಡ್-ಅಪ್ ಪಡೆಯುತ್ತಾರೆ, ಆದರೆ ಅವರು ತಮ್ಮ ಭ್ರಮೆಯಿಂದ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ನಂಬುತ್ತಾರೆ. ಎಲ್ಲಾ ಸ್ಟಾರ್ಗಳು ಮನರಂಜನೆಗಾಗಿ/ಮನರಂಜನೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಸಾಕಷ್ಟು ‘ಉಡುಗೊರೆ’ ಪಡೆದಿದ್ದಾರೆ; ಈ ಸ್ಟಾರ್ಗಳು ತಮ್ಮ ಕಾನೂನಿನ ಎಲ್ಲಾ ಉಲ್ಲಂಘನೆಗಳಿಗೆ ಜವಾಬ್ದಾರರಾಗುವ ಸಮಯ ಬಂದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.