ತಾಯಿ ತನ್ನ ಪ್ರೀತಿಗೆ ವಿರೋಧಿಸಿದಳು ಎಂದು ಬೃಹತ್ ಜಾಹೀರಾತು ಫಲಕ ಏರಿದ ಬಾಲಕಿ | ಮುಂದೇನಾಯ್ತು ? - Mahanayaka
8:29 PM Wednesday 11 - December 2024

ತಾಯಿ ತನ್ನ ಪ್ರೀತಿಗೆ ವಿರೋಧಿಸಿದಳು ಎಂದು ಬೃಹತ್ ಜಾಹೀರಾತು ಫಲಕ ಏರಿದ ಬಾಲಕಿ | ಮುಂದೇನಾಯ್ತು ?

09/11/2020

ಇಂದೋರ್:  ತಾಯಿ ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದಳು ಎನ್ನುವ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ್ಳು  ಬೃಹತ್ ಜಾಹೀರಾತು ಫಲಕದ ಮೇಲೆ ಹತ್ತಿಕುಳಿತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಇಂದೋರ್ ನ ಪರದೇಶಿಪುರದ ಬಂದೇರಿ ಸೇತುವೆ ಬಳಿ ನಡೆದಿದೆ.

ಬಾಲಕಿಯು ಇನ್ನೋರ್ವ ಬಾಲಕನನ್ನು ಪ್ರೀತಿಸುತ್ತಿದ್ದಳು.  ಈ ವಿಚಾರ ಮನೆಯಲ್ಲಿ ಬೆಳಕಿಗೆ ಬಂದ ಬಳಿಕ ತಾಯಿಯು ಆಕೆಗೆ ಗದರಿದ್ದರು ಮತ್ತು ಬಾಲಕನಿಂದ ದೂರ ಇರುವಂತೆ ಹೇಳಿದ್ದರು. ಇದರಿಂದ ಕೋಪಗೊಂಡ ಬಾಲಕಿಯು ನೇರವಾಗಿ ಹೋಗಿ ಜಾಹೀರಾತುಫಲಕದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

ಹುಡುಗಿಯು ಬೃಹತ್ ಜಾಹೀರಾತು ಫಲಕಕ್ಕೆ ಹತ್ತುತ್ತಿರುವುದನ್ನು ಕಂಡು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಕೆಳಗಡೆ ಇಳಿಯುವಂತೆ ಮನವಿ ಮಾಡಿದರೂ ಬಾಲಕಿ ಕೇಳಲಿಲ್ಲ ಕೊನೆಗೆ ಘಟನಾ ಸ್ಥಳಕ್ಕೆ ಆಕೆ ಪ್ರೀತಿಸುತ್ತಿದ್ದ ಬಾಲಕನನ್ನು ಕರೆದು ಆಕೆಯೊಂದಿಗೆ ಮಾತನಾಡಿಸಿದ್ದು, ಆ ಬಳಿಕ ಆಕೆ ಜಾಹೀರಾತು ಫಲಕದಿಂದ ಕೆಳಗೆ ಇಳಿದಿದ್ದಾಳೆ ಎಂದು ಪಾರ್ಡೆಶಿಪುರ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಪ್ಯಾಟಿದಾರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ