ಒಂದು ಜಾಹೀರಾತಿನಿಂದ ಬೆಳಕಿಗೆ ಬಂತು ಭಾರೀ ವಂಚನೆ | 14 ಸಾವಿರ ಕೋಟಿ ನುಂಗಿ ನೀರು ಕುಡಿದ ಸಹೋದರರು
ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 24 ಲಕ್ಷ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದಾಗಿ ಇತ್ತೀಚೆಗಷ್ಟೇ ಬಿಜೆಪಿ ಜಾಹೀರಾತು ನೀಡಿ ಮುಜುಗರಕ್ಕೀಡಾಗಿತ್ತು. ಇದೀಗ ಈ ಜಾಹೀರಾತಿನಿಂದಲೇ ದೊಡ್ಡ ಹಗರಣವೊಂದನ್ನು ಸಿಬಿಐ ಪತ್ತೆ ಹಚ್ಚಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ ಎಫ್ ಎಲ್) ನಕಲಿ ಖಾತೆಗಳನ್ನು ಸೃಷ್ಟಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಬರುವ ಸಹಾಯಧನವನ್ನು ಪಡೆದಿದೆ ಎಂದು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಜಾಹೀರಾತಿನಲ್ಲಿ ಕಾಣಿಸಿಕೊಂಡ ಲಕ್ಷ್ಮೀ ದೇವಿ ಎಂಬ ಮಹಿಳೆಗೆ ಉಳಿದಿಕೊಳ್ಳಲು ಸ್ವಂತ ಮನೆಯೇ ಇಲ್ಲ. ಅವರು ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಈಗ ಪ್ರಧಾನ್‌ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನಡೆದಿರುವ ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಲಕ್ಷ್ಮೀ ದೇವಿಯಂತಹ 24 ಲಕ್ಷ ಕುಟುಂಬಗಳಿಗೆ ಮನೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಇವೆಲ್ಲವೂ ಸುಳ್ಳಾಗಿದ್ದು, ಅಸ್ಥಿತ್ವದಲ್ಲಿಯೇ ಇಲ್ಲದ ನಕಲಿ, ಕಾಲ್ಪನಿಕ ಅಕೌಂಟ್ ಗಳನ್ನು ಬಳಸಿ, ಸುಳ್ಳು ದಾಖಲೆಗಳನ್ನು ಬಳಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ.
ವಂಚನೆ ಮತ್ತು ಹಣದ ಪ್ರಕರಣದಲ್ಲಿ ಜೈಲಿನಲ್ಲಿರುವ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ವಸತಿ ಯೋಜನೆಯಲ್ಲಿ 14 ಸಾವಿರ ಕೋಟಿ ಲಪಟಾಯಿಸಿದ್ದಾರೆ. ಕಪಿಲ್ ಮತ್ತು ಧೀರಜ್ ವಾಧ್ವಾನ್ ನಕಲಿ ಮತ್ತು ಕಾಲ್ಪನಿಕ 2.6 ಲಕ್ಷ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ ಭಾರತ ಸರ್ಕಾರದಿಂದ 1,880 ಕೋಟಿ ಬಡ್ಡಿ ಸಹಾಯಧನವನ್ನು ಪಡೆದಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಕಳ್ಳತನದ ಆರೋಪ ಹೊರಿಸಿ ಬದುಕಿ ಬಾಳಬೇಕಿದ್ದ ಬಾಲಕನನ್ನು ಥಳಿಸಿಕೊಂದ ಅಂಗಡಿ ಮಾಲಕ !