‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!
ಶಹಜಾನ್ ಪುರ: ಇತ್ತೀಚೆಗೆ ಬಿಡುಗಡೆಯಾಗಿರುವ ಜೈ ಭೀಮ್ ಚಿತ್ರದ ಕಥೆಯನ್ನೇ ಹೋಲುವ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದು, ತಾನು ಮಾಡದ ತಪ್ಪಿಗೆ 19 ವರ್ಷಗಳ ಕಾಲ ಜೈಲು ಪಾಲಾದ ವ್ಯಕ್ತಿಯೊಬ್ಬರಿಗೆ ಕೊನೆಗೂ ನ್ಯಾಯ ದೊರಕಿದೆ.
ಉತ್ತರ ಪ್ರದೇಶದ ಶಹಜಾನ್ ಪುರದಲ್ಲಿ 2002ರ ಅಕ್ಟೋಬರ್ 15ರಂದು ಅವದೇಶ್ ಸಿಂಗ್ ಹಾಗೂ ಅವರ ಮೂವರು ಮಕ್ಕಳಾದ ರೋಹಿಣಿ(9), ನಿಶಾ(7), ಸುರಭಿ(6) ರಾತ್ರಿ ತಮ್ಮ ಮನೆಯಲ್ಲಿ ಊಟ ಮಾಡಿ ಮಲಗಿದ್ದರು. ಈ ವೇಳೆ ಅವದೇಶ್ ಸಿಂಗ್ ಮೇಲಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ರಾತ್ರಿ ವೇಳೆ ರಾಜೇಂದ್ರ ಹಾಗೂ ಆತನ ಮಗ ನರೇಶ್ ಹಾಗೂ ಚುಟುಕುನ್ನು ಎಂಬ ಮೂವರು ಬಂದೂಕು ಹಿಡಿದುಕೊಂಡು ಬಂದು ಅವದೇಶ್ ಮನೆಗೆ ನುಗ್ಗಿದ್ದಾರೆ.
ಈ ವೇಳೆ ಎದುರಾಳಿಗಳಿಗೆ ಏಟಿಗೆ ಅವದೇಶ್ ಸಿಂಗ್ ಪ್ರತಿಯಾಗಿ ಏಟು ನೀಡಿದ್ದಾರೆ. ಈ ವೇಳೆ ಬೇರೆ ದಾರಿ ಕಾಣದ ಮೂವರು ಮನ ಬಂದಂತೆ ಗುಂಡು ಹಾರಿಸಿದ್ದು, ಅವದೇಶ್ ಸಿಂಗ್ ನ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ವೇಳೆ ಅವದೇಶ್ ಸಿಂಗ್ ಸ್ಥಳದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದರು.
ಘಟನೆಯ ತನಿಖೆಗೆ ಬಂದ ಪೊಲೀಸ್ ಅಧಿಕಾರಿ ಹೋಶಿಯಾರ್ ಸಿಂಗ್, ಆರೋಪಿಗಳ ಜೊತೆಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದು, ತೀವ್ರ ಬಡತನದ ಹಿನ್ನೆಲೆಯಲ್ಲಿ ಅವದೇಶ್ ಸಿಂಗ್ ತನ್ನ ಮಕ್ಕಳನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಸುಳ್ಳು ಚಾರ್ಜ್ ಶೀಟ್ ಸಲ್ಲಿಸಿದರು. ಇದಕ್ಕೆ ದಿನೇಶ್ ಕುಮಾರ್ ಎಂಬಾತ ಸಾಕ್ಷಿ ಹೇಳಿದ್ದರಿಂದಾಗಿ ಮಾಡದ ತಪ್ಪಿಗೆ ಅವದೇಶ್ ಸಿಂಗ್ ಜೈಲು ಪಾಲಾಗಿದ್ದರು.
ಮೂವರು ಮಕ್ಕಳನ್ನು ತನ್ನ ಕಣ್ಣ ಮುಂದೆಯೇ ಸುಟ್ಟು ಹಾಕಿ ತನ್ನನ್ನೇ ಜೈಲು ಪಾಲು ಮಾಡಿದ್ದನ್ನು ಒಬ್ಬ ತಂದೆ ಹೇಗೆ ತಾನೆ ಸಹಿಸಲು ಸಾಧ್ಯ? ಅವದೇಶ್ ಸಿಂಗ್ ಈ ಪ್ರಕರಣವನ್ನು ಸುಮ್ಮನೆ ಬಿಡಲಿಲ್ಲ, ಕಾನೂನು ಹೋರಾಟ ಮುಂದುವರಿಸಿದ ಅವರಿಗೆ ಇದೀಗ ನ್ಯಾಯ ದೊರಕಿದ್ದು, 19 ವರ್ಷಗಳ ಬಳಿಕ ತಾನು ನಿರಪರಾಧಿ ಎಂದು ಸಾಬೀತು ಪಡಿಸಿದ್ದಲ್ಲದೇ ತನ್ನ ವಿರುದ್ಧ ಸಂಚು ಹೂಡಿದವರಿಗೆ ತಕ್ಕ ಶಿಕ್ಷೆಯಾಗಲು ಕಾರಣರಾಗಿದ್ದಾರೆ.
ಅವದೇಶ್ ಸಿಂಗ್ ಅವರ ಪ್ರಕರಣದಲ್ಲಿ ತೀರ್ಪು ನೀಡಿರುವ ಉತ್ತರ ಪ್ರದೇಶದ ಶಹಜಾನ್ ಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ನಿಜವಾದ ಕೊಲೆಗಾರರಾದ ರಾಜೇಂದ್ರ ಮತ್ತು ನರೇಶ್ ಎಂಬವರಿಗೆ ಮರಣದಂಡನೆ ವಿಧಿಸಿದೆ. ಇನ್ನೊಬ್ಬ ಅಪರಾಧಿ ಚುಟುಕುನ್ನು ಈಗಾಗಲೇ ಸತ್ತು ಹೋಗಿದ್ದಾನೆ.
ಇನ್ನೂ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ನೊಂದವರಿಗೆ ನ್ಯಾಯ ಒದಗಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ಹೋಶಿಯಾರ್ ಸಿಂಗ್ ಹಾಗೂ ಪುಟ್ಟ ಮಕ್ಕಳ ಸಾವಿಗೆ ತಂದೆಯೇ ಕಾರಣ ಎಂದು ಸುಳ್ಳು ಸಾಕ್ಷಿ ಹೇಳಿದ್ದ ದಿನೇಶ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ ನ್ಯಾಯಾಧೀಶ ಸಿದ್ಧಾರ್ಥ್ ಕುಮಾರ್ ರಾಘವ್ ಆದೇಶ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೆಂಗಳೂರಿನಲ್ಲಿ ಎರಡು ಬಾರಿ ಭೂಕಂಪನದ ಅನುಭವ: ಮಂಡ್ಯದಲ್ಲಿ ಕೇಳಿ ಬಂತು ನಿಗೂಢ ಶಬ್ಧ!
ವರದಕ್ಷಿಣೆ ನೀಡಲು ಕೂಡಿಟ್ಟಿದ್ದ 75 ಲಕ್ಷ ರೂ. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ದಾನ ಮಾಡಿದ ಯುವತಿ!
ಮಹಿಳಾ ಸಿಬ್ಬಂದಿಗಳೊಂದಿಗೆ ಆರೋಗ್ಯಾಧಿಕಾರಿ ಚೆಲ್ಲಾಟ: ವಿಡಿಯೋ ವೈರಲ್
ತೀವ್ರ ಎದೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಣ್ಣಾ ಹಜಾರೆ
ಪರೀಕ್ಷೆ ಬರೆಯಲು ತೆರಳಿದ್ದ ಯುವತಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ!