ಸಂವಿಧಾನ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ: ಜೈಭೀಮ್  ಜನಜಾಗೃತಿ ಜಾಥಾದಲ್ಲಿ ಎಂ.ಗೋಪಿನಾಥ್ - Mahanayaka
8:01 PM Wednesday 11 - December 2024

ಸಂವಿಧಾನ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ: ಜೈಭೀಮ್  ಜನಜಾಗೃತಿ ಜಾಥಾದಲ್ಲಿ ಎಂ.ಗೋಪಿನಾಥ್

jai bheem janajagruti jatha
02/11/2022

ಬೆಳ್ತಂಗಡಿ: ಸರ್ಕಾರ ಹೇಳುತ್ತಿದೆ ಸಂವಿಧಾನ ಜಾರಿ ಆಗಿದೆ ಅಂತ, ಆದರೆ ನಾವು, ಸಂವಿಧಾನ ಜಾರಿ ಆಗಿಲ್ಲ ಅಂತ ಹೇಳುತ್ತಿದ್ದೇವೆ. ಕೇವಲ 15% ಇರುವಂತಹವರ ಕೆಲವೇ ಜನರ ಹಿತ ಎಷ್ಟು ಬೇಕೋ ಅಷ್ಟು ಮಾತ್ರ ಸಂವಿಧಾನ ಜಾರಿಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ(BSP) ಕರ್ನಾಟಕ ರಾಜ್ಯ ಸಂಯೋಜಕರು, ಹಿರಿಯ ಬಿಎಸ್ ಪಿ ನಾಯಕ ಎಂ.ಗೋಪಿನಾಥ್ ಹೇಳಿದರು.

ಬಹುಜನ ಸಮಾಜ ಪಕ್ಷ ಸಂವಿಧಾನದ ಸಂರಕ್ಷಣೆಗಾಗಿ  ಕರ್ನಾಟಕ ರಾಜ್ಯ ವ್ಯಾಪ್ತಿ ಸಂಚಾರಿಸುತ್ತಿರುವ ಜೈಭೀಮ್  ಜನಜಾಗೃತಿ ಜಾಥಾ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ  ಬುಧವಾರ ಸಂಜೆ 5:30 ಗಂಟೆ ಸುಮಾರಿಗೆ ಆಗಮಿಸಿದ್ದು, ಈ ಜಾಥಾವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸಂವಿಧಾನ ಸಂಪೂರ್ಣವಾಗಿ ಜಾರಿ ಆಗಲಿ ಎಂದು ನಾವು ಹೇಳುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾಗಿವೆ.  ನಾವು ಈಗ ಸಂವಿಧಾನ ಜಾರಿಯಾಗಬೇಕು ಅಂತ ಹೇಳುತ್ತಿದ್ದೇವೆ. ಅದರ ಅರ್ಥ ಸಂವಿಧಾನ ಇನ್ನೂ ಜಾರಿಯಾಗಿಲ್ಲ. ಸರ್ಕಾರ ಹೇಳುತ್ತಿದೆ ಸಂವಿಧಾನ ಜಾರಿ ಆಗಿದೆ ಅಂತ, ಆದರೆ ನಾವು, ಸಂವಿಧಾನ ಜಾರಿ ಆಗಿಲ್ಲ ಅಂತ ಹೇಳುತ್ತಿದ್ದೇವೆ ಎಂದರು.

ಸಂವಿಧಾನವನ್ನು ಅರ್ಪಣೆ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು,  ಈ ಸಂವಿಧಾನವನ್ನು  ಹೀಗೆಯೇ ಯಥಾವತ್ತಾಗಿ ಜಾರಿ ಮಾಡಿದರೆ, 20 ವರ್ಷಗಳಲ್ಲಿ ಇಲ್ಲಿ ಜಾತಿ ದೌರ್ಜನ್ಯ ಇರುವುದಿಲ್ಲ, ಧರ್ಮಗಳ ಗಲಾಟೆ ಇರುವುದಿಲ್ಲ, ಬಡತನ ಇರುವುದಿಲ್ಲ, ಅನಕ್ಷರತೆ ಇರೋದಿಲ್ಲ, ನಿರುದ್ಯೋಗ ಇರೋದಿಲ್ಲ, ಹಸಿವು ಇರೋದಿಲ್ಲ,  ಅಪೌಷ್ಠಿಕತೆ ಇರೋದಿಲ್ಲ. ಭಾರತ ದೇಶ ಸುಭೀಕ್ಷವಾಗಿ ಪ್ರಬುದ್ಧ ಭಾರತವಾಗುತ್ತದೆ ಎಂದು ಹೇಳಿದ್ದರು. ಆದರೆ, ಸಂವಿಧಾನ ಜಾರಿಯಾಗಿ 70 ವರ್ಷವಾಗಿದೆ. ಇಲ್ಲಿ ಜಾತಿ ವ್ಯವಸ್ಥೆ ಹಾಗೆಯೇ ಇದೆ. ಜಾತಿ ಹೆಸರಿನಲ್ಲಿ ಕೊಲೆ, ಅತ್ಯಾಚಾರ, ಹಲ್ಲೆ ನಡೆಯುತ್ತಿದೆ. ಹಿಂದೂ ಮುಸ್ಲಿಮ್ ಗಲಾಟೆ ನಡೆಯುತ್ತಿದೆ.  ಬಡತನ ಇದೆ. ನಿರುದ್ಯೋಗ ಇದೆ.  ಎಲ್ಲ ಇದೆ.  ಇವೆಲ್ಲವೂ ಇದೆ ಎಂದರೆ ಅರ್ಥ ಏನಂದ್ರೆ, ಸಂವಿಧಾನ ಜಾರಿಯಾಗಿಲ್ಲ.  ಸಂವಿಧಾನ ಜಾರಿಯೇ ಆಗಿಲ್ಲ ಅನ್ನೋದು ಇದರ ಅರ್ಥ ಅಲ್ಲ,  15% ಇರುವಂತಹ ಕೆಲವೇ ಜನರ ಹಿತಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಜಾರಿಯಾಗಿದೆ ಎಂದು ಅವರು ಹೇಳಿದರು.

ಉಜಿರೆಯಲ್ಲಿ ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ತಾಲೂಕು ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್,  ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಜನಜಾಗೃತಿ ಜಾಥಾವನ್ನು ಸ್ವಾಗತಿಸಿದರು.

ಬಳಿಕ ಅದೇ ಮಾರ್ಗವಾಗಿ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ  ಮೂಲಕ ಸಾಗಿ ಬೆಳ್ತಂಗಡಿ ನಗರ  ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ  ಕರ್ನಾಟಕ ರಾಜ್ಯ ಉಸ್ತುವಾರಿ ನಿತಿನ್ ಸಿಂಗ್ ,   ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್, ಬಿಎಸ್ಪಿ ದ.ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು ಮಾತನಾಡಿದರು.

ಸಭೆಯಲ್ಲಿ ಕಲಾ ತಂಡ ಬಹುಜನ ಗೀತೆಯನ್ನು ಹಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ  ಜಾಕಿರ್ ಹುಸೇನ್, ರಾಜ್ಯ ಕಾರ್ಯದರ್ಶಿ ವೇಳಾಯುಧನ್ , ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಡಿ, ಬಿಎಸ್ಪಿ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು,  ಜಿಲ್ಲಾ ಸಂಯೋಜಕ ನಾರಾಯಣ್ ಭೋದ್, ಬಿಎಸ್ಪಿ ದ.ಕ. ಜಿಲ್ಲಾ ಖಜಾಂಚಿ ವಿಮಲಾ ಕೆ.,  ಪೇಜಾವರ ಬಿಎಸ್ಪಿ ದ.ಕ.ಜಿಲ್ಲಾ ಕಚೇರಿ ಕಾರ್ಯದರ್ಶಿ ಶಿವರಾಮ್, ಬಿಎಸ್ಪಿ ಮಂಗಳೂರು ಉತ್ತರ ಉಸ್ತುವಾರಿ ಲೋಕೇಶ್ ಮುತ್ತೂರು, ಪುತ್ತೂರು ತಾಲೂಕು ಅಧ್ಯಕ್ಷ  ನಿಶಾಂತ್, ಬಿಎಸ್ಪಿ ಮಂಗಳೂರು ಉತ್ತರ ಅಧ್ಯಕ್ಷ  ಉಮೇಶ್ ಪಾಡ್ಯಾರು, ಬಿಎಸ್ಪಿ ಬೆಳ್ತಂಗಡಿ ಉಸ್ತುವಾರಿ ಸಂಜೀವ ನೀರಾಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪಿ.ಎಸ್. ಶ್ರೀನಿವಾಸ್, ಬೆಳ್ತಂಗಡಿ ತಾಲೂಕು ಸಂಯೋಜಕರು ಸಂಜೀವ ಉಪ್ಪಿನಂಗಡಿ, ಮೂಡುಬಿದಿರೆ ನಗರ ಉಸ್ತುವಾರಿ ವಿಠಲ್ ಸಿದ್ದಾರ್ಥ ನಗರ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಎಸ್ಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮುತ್ತೂರು ಕಾರ್ಯಕ್ರಮ ನಿರೂಪಿಸಿದರು, ಬಿಎಸ್ಪಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ