ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು
ನವದೆಹಲಿ: ಬೇಲ್ ಮೇಲೆ ಬಂದಿದ್ದ ವ್ಯಕ್ತಿಯೋರ್ವ ಪೊಲೀಸ್ ರಕ್ಷಣೆಯಲ್ಲಿದ್ದ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ದೆಹಲಿ ಪೊಲೀಸ್ ಇಲಾಖೆ ಅಮಾನತು ಮಾಡಿದೆ.
ಅಮಾನತುಗೊಂಡ ಅಧಿಕಾರಿಗಳು ನಗರದ ಗೋವಿಂದ್ಪುರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ವಿರುದ್ಧ ವಿಭಾಗೀಯ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂಡು ತಿಳಿದುಬಂದಿದೆ. ನಂದಾ ನಾಯಕ್ ಎಂಬಾತ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾನೆ.
ಆರೋಪಿ ನಂದಾ ನಾಯಕ್ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಆತನ ಪತ್ನಿಯೇ ಪ್ರಮುಖ ಸಾಕ್ಷಿಯಾಗಿದ್ದಳು. ಆತ ಜೂನ್ ತಿಂಗಳಲ್ಲಿ ಬೇಲ್ ಪಡೆದು ಹೊರ ಬಂದಿದ್ದ. ಹೊರಬಂದವನು ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಪತ್ನಿಯ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ.
ಈತ ತನ್ನ ಮೇಲೆ ಒತ್ತಡ ಹಾಕುತ್ತಿದ್ದಾನೆ. ಆತನ ಬೇಲ್ ರದ್ದು ಮಾಡುವಂತೆ ಆಕೆ, ನ್ಯಾಯಾಲಯದ ಗಮನಕ್ಕೆ ತಂದಿದ್ದಳು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ಬೇಲ್ ರದ್ದುಗೊಳಿಸಿ ಇನ್ನೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗಲು ಸೂಚಿತ್ತು.
ಅಲ್ಲದೆ ಆತನ ಪತ್ನಿ ಜಾರ್ನಾಗೆ ರಕ್ಷಣೆ ಒದಗಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಅಷ್ಟರೊಳಗೆ ಆರೋಪಿ ಪತ್ನಿಯ ಸೆರಗಿನಿಂದಲೇ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ
ಟ್ವಿಟರ್ ಬರ್ಡ್ ಫ್ರೈ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು | ರಾಹುಲ್ ಖಾತೆ ಲಾಕ್ ಗೆ ಆಕ್ರೋಶ
ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಬಂಧಿತ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ದಂಪತಿ: ಕೊನೆಯ ಸಂದೇಶದಲ್ಲಿತ್ತು ಮನಕಲಕುವ ನೋವು
ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್