ಜೈಲಲ್ಲಿ ಸತ್ಯಾಗ್ರಹ: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಅನ್ನಹ್ದ ಪಕ್ಷದ ನಾಯಕ - Mahanayaka

ಜೈಲಲ್ಲಿ ಸತ್ಯಾಗ್ರಹ: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಅನ್ನಹ್ದ ಪಕ್ಷದ ನಾಯಕ

16/07/2024

ಜೈಲಲ್ಲಿ ನಿರಹಾರ ಸತ್ಯಾಗ್ರಹ ನಡೆಸುತ್ತಿದ್ದ ತುನಿಷಿಯಾದ ಅನ್ನಹ್ದ ಪಕ್ಷದ ನಾಯಕ ನೂರುದ್ದೀನ್ ಅಲ್ ಬಿರ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 18 ದಿನಗಳಿಂದ ಅವರು ನಿರಾಹಾರ ಸತ್ಯಾಗ್ರಹ ನಡೆಸುತ್ತಿದ್ದರು. ಅಧ್ಯಕ್ಷ ಸಯೀದಿಯವರು ವಿಪಕ್ಷ ನಾಯಕರನ್ನು ಜೈಲಿಗೆ ಹಾಕುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಮಾಜಿ ಕಾನೂನು ಸಚಿವರಾಗಿರುವ ಅಲ್ ಬಿರ್ರಿ ಅವರನ್ನು ಈಗಿನ ಸರ್ವಾಧಿಕಾರಿ ಸರ್ಕಾರವು ದೇಶದ ವಿರುದ್ಧ ಸಂಚು ನಡೆಸಿದ ಆರೋಪದಲ್ಲಿ ಜೈಲಿಗಟ್ಟಿದೆ. ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದಲ್ಲಿ 2021 ರಲ್ಲಿ ಇವರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. 2022 ರಲ್ಲಿ ಈ ಆರೋಪವನ್ನು ನ್ಯಾಯಾಲಯ ವಜಾ ಮಾಡಿದರೂ ಅವರನ್ನು ಗ್ರಹಬಂಧನದಿಂದ ಮುಕ್ತಗೊಳಿಸಿರಲಿಲ್ಲ

2023 ರಿಂದ ಟ್ಯುನಿಷಿಯಾದಲ್ಲಿ ಉದ್ಯಮಿಗಳು ನ್ಯಾಯಾಧೀಶರು ಆಕ್ಟಿವಿಸ್ಟ್ ಗಳು ಮಾಧ್ಯಮದ ಮಂದಿ ಸಹಿತ ವಿವಿಧ ಮುಖಂಡರನ್ನು Itself ಜೈಲಿಗಟ್ಟುವ ಸತ್ರ ಪ್ರಾರಂಭವಾಗಿದೆ. ಅನ್ನಹ್ ದ ಸರಕಾರವನ್ನು 2021 ರಲ್ಲಿ ಅಧ್ಯಕ್ಷ ಕೈಸ್ ಸಯೀದಿ ಯವರು ವಜಾ ಗೊಳಿಸಿದ್ದರು


Advertisement

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ