ಜೈಲಿನಲ್ಲಿ ಮಹಿಳಾ ಪೊಲೀಸ್ ಮುಂದೆ ಬಟ್ಟೆ ಬಿಚ್ಚಿ ನಿಂತು ಕೈದಿಯಿಂದ ಅನುಚಿತ ವರ್ತನೆ!
ಸೂರತ್: ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲದೇ, ಬಂಧಿಸಲು ಮುಂದಾದ ಪೊಲೀಸರ ಮೇಲೆಯೂ ಹಲ್ಲೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಠಾಣೆಗೆ ಕರೆತಂದು ಲಾಕಪ್ ಗೆ ತಳ್ಳಿದ ಬಳಿಕ ಆರೋಪಿ, ಮಹಿಳೆ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಇಲ್ಲಿನ ತಲೋದರ ಗ್ರಾಮದ 55 ವರ್ಷ ವಯಸ್ಸಿನ ಸುರೇಶ್ ನಂದ್ ವಾನಿ ಎಂಬಾತನನ್ನು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿರುವುದಕ್ಕೆ ಹಾಗೂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಕ್ಕೆ ಬಂಧಿಸಿ, ಸಲಾಬತ್ಪುರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕವೂ ಆರೋಪಿ ಜೈಲಿನಲ್ಲಿ ಗಲಾಟೆ ಮುಂದುವರಿಸಿದ್ದಾನೆ.
ಜೈಲಿನಲ್ಲಿ ಗಲಾಟೆ ಮಾಡುತ್ತಿದ್ದ ವೇಳೆ ಮಹಿಳಾ ಪೊಲೀಸ್ ವೊಬ್ಬರು, ಗಲಾಟೆ ಮಾಡಬೇಡ ಎಂದು ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರೋಪಿಯು ತನ್ನ ವಸ್ತ್ರಗಳನ್ನು ಕಳಚಿ, ಅಶ್ಲೀಲವಾಗಿ ಪೊಲೀಸ್ ಸಿಬ್ಬಂದಿಯನ್ನು ಕರೆದಿದ್ದು, ಈ ವೇಳೆ ಸ್ಟೇಷನ್ ನಲ್ಲಿದ್ದ ಪೊಲೀಸರು ಲಾಕಪ್ ನೊಳಗೆ ಹೋಗಿ ತಮ್ಮ ಶೈಲಿಯಲ್ಲಿ ಬುದ್ಧಿ ಹೇಳಿದ್ದು, ಕೊನೆಗೂ ಆರೋಪಿ ಬಟ್ಟೆ ಧರಿಸಿ ಕುಳಿತುಕೊಂಡಿದ್ದಾನೆ.
ಕೇವಲ ಗಲಾಟೆಯ ವಿಚಾರದಲ್ಲಿ ಬಂಧಿತನಾಗಿದ್ದ ಆರೋಪಿಯ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯ, ಅನುಚಿತ ವರ್ತನೆಯ ಕೇಸನ್ನೂ ಪೊಲೀಸರು ಜಡಿದಿದ್ದು, ಆರೋಪಿಯ ಅಹಂಕಾರಿ ವರ್ತನೆಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.
ಇನ್ನಷ್ಟು ಸುದ್ದಿಗಳು…
ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ
ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಎನ್ನುವುದಕ್ಕೆ ಸಿಕ್ಕಿದೆ ಬಲವಾದ ಸಾಕ್ಷಿ!
ಮಂಗಳೂರು: ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ
ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್
ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!