ಜಮೀನು ಅಗೆಯುವಾಗ ಸಿಕ್ಕಿತು ಭಾರೀ ಪ್ರಮಾಣದ ನಿಧಿ! | ನಿಧಿ ಕಂಡು ಜಮೀನು ಮಾಲಕ ಮಾಡಿದ್ದೇನು ಗೊತ್ತಾ?

pot of gold
08/04/2021

ಹೈದರಾಬಾದ್: ಸಾಮಾನ್ಯವಾಗಿ ಒಳ್ಳೆಯ ಬೆಳೆ ತೆಗೆಯುವುದನ್ನು “ನೆಲ ಉತ್ತು ಚಿನ್ನ ತೆಗೆಯುವುದು ಎಂದು ಹೇಳುತ್ತೇವೆ ಆದರೆ ಇಲ್ಲೊಬ್ಬ ರೈತನಿಗೆ ತನ್ನ ಜಮೀನಿನಲ್ಲಿ ಕಸಕಡ್ಡಿ ತೆರವು ಮಾಡುತ್ತಿದ್ದ ವೇಳೆ ಭಾರೀ ಬೆಲೆಬಾಳುವ ಚಿನ್ನಾಭರಣಗಳು ದೊರೆತಿವೆ.

ತೆಲಂಗಾಣದ ಜನಗಂ ಜಿಲ್ಲೆಯ ಪೆಂಬಾರ್ತಿಯ ನರಸಿಂಹ ಎಂಬ ರೈತ, ಕೃಷಿ ಮಾಡುವ ಉದ್ದೇಶದಿಂದ  11 ಎಕರೆ ಜಮೀನು ಖರೀದಿಸಿದ್ದರು. ಕೃಷಿ ನಡೆಸಲು ಅನುಕೂಲವಾಗುವಂತೆ ಸಾಗುವಳಿ ನಡೆಸುತ್ತಿದ್ದ ವೇಳೆ ಒಡೆದು ಹೋಗಿರುವ ಸ್ಥಿತಿಯಲ್ಲಿದ್ದ ಪಾತ್ರೆಯೊಂದು ಪತ್ತೆಯಾಗಿದ್ದು, ಈ ಪಾತ್ರೆಯಲ್ಲಿ ಸುಮಾರು 5 ಕೆ.ಜಿ. ಚಿನ್ನಾಭರಣ ಪತ್ತೆಯಾಗಿದೆ.

ಇಷ್ಟೊಂದು ದೊಡ್ಡ ಮಟ್ಟದ ಚಿನ್ನಾಭರಣಗಳನ್ನು ಕಂಡ ರೈತ ನರಸಿಂಹ ಶಾಕ್ ಗೊಳಗಾಗಿದ್ದು, ಘಟನಾ ಸ್ಥಳದಲ್ಲಿ ಜೋರಾಗಿ ಬೊಬ್ಬೆ ಹೊಡೆದು, ಕಿರುಚಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ನೂ ನಿಧಿ ಪತ್ತೆಯಾಗಿರುವ ಬೆನ್ನಲ್ಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅಧಿಕಾರಿಗಳು  ಚಿನ್ನಾಭರಣ ಪರಿಶೀಲಿಸಿ, ನಿಧಿ ವಶಪಡಿಸಿಕೊಂಡಿದ್ದಾರೆ. ಇನ್ನೂ ಈ ಚಿನ್ನಾಭರಣ ದೇವಿಗೆ ಸೇರಿದ್ದಾಗಿದೆ. ಅದೇ ಸ್ಥಳದಲ್ಲಿ ದೇವಿಗೆ ಗುಡಿ ನಿರ್ಮಿಸುತ್ತೇನೆ ಎಂದು  ರೈತ ಹೇಳಿದ್ದಾರೆ.

https://twitter.com/revathitweets/status/1380102413223268355?s=20

ಇತ್ತೀಚಿನ ಸುದ್ದಿ

Exit mobile version