ಗಜ ಸೈನ್ಯ ಭೀತಿ: ಜಮೀನುಗಳಿಗೆ 50ಕ್ಕೂ ಹೆಚ್ಚಿನ ಕಾಡಾನೆ ಲಗ್ಗೆ!!: Video

ಚಾಮರಾಜನಗರ: ಒಂದಲ್ಲ, ಎರಡಲ್ಲ 50 ಕ್ಕೂ ಹೆಚ್ಚು ಕಾಡಾನೆ ಹಿಂಡು ಜಮೀನಿನಲ್ಲಿ ಓಡಾಡಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿರುವ ಘಟನೆ ಚಾಮರಾಜನಗರ ಹಾಗೂ ತಾಳವಾಡಿ ಗಡಿಭಾಗದಲ್ಲಿ ನಡೆದಿದೆ.
ಮತ್ತೆ ಕಾಡಿನಿಂದ ನಾಡಿತ್ತ ಗಜಪಡೆ ಬಂದಿರುವುದನ್ನು ಕಂಡ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಬ್ಬು, ತೆಂಗು ಸೇರಿದಂತೆ ಕೆಲ ಬೆಳೆಗಳು ಸಂಪೂರ್ಣ ನಾಶವಾಗುತ್ತಿದ್ದು ಆನೆಭಯದಿಂದ ರಾತ್ರಿ ಕಾವಲಿಗೆ ಹೋಗುವುದನ್ನೇ ರೈತರು ಬಿಟ್ಟಿದ್ದಾರೆ.
ಒಂದೆರೆಡು ಆನೆ ನೋಡುತ್ತಿದ್ದ ರೈತರು ಇದೀಗ ಕೆಲ ದಿನಗಳಿಂದ 50-60 ಆನೆ ಕಾಣುತ್ತಿರುವುದು ದಿಗಿಲಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಂಡು ರೈತರ ಕೃಷಿಯ ರಕ್ಷಣೆಗೆ ಮುಂದಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw