160 ಭಾಷೆಗಳಲ್ಲಿ ತೆರೆಕಾಣಲಿದೆ ಅವತಾರ್ 2: ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
2009ರಲ್ಲಿ ತೆರೆಕಂಡು ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಲಿವುಡ್ ಸಿನಿಮಾ ‘ಅವತಾರ್’ನ ಎರಡನೇ ಭಾಗ 160 ಭಾಷೆಗಳಲ್ಲಿ ಇದೇ ವರ್ಷ (2022) ಡಿಸೆಂಬರ್ 16ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ತಿಳಿಸಿದ್ದಾರೆ.
ಈ ಚಿತ್ರಕ್ಕೆ ಅವತಾರ್: ದಿ ವೇ ಆಫ್ ವಾಟರ್’ ಎಂದು ಹೆಸರು ನೀಡಲಾಗಿದೆ ಎಂದು ಜೇಮ್ಸ್ ಕ್ಯಾಮೆರಾನ್ ಚಿತ್ರದ ಕುರಿತಂತೆ ಮಾಹಿತಿ ನೀಡಿದ್ದಾರೆ.
2009ರಲ್ಲಿ ಬಿಡುಗಡೆಯಾದ ಅವತಾರ್, ಜಾಗತಿಕವಾಗಿ ಅಂದಾಜು ರೂ.21 ಸಾವಿರ ಕೋಟಿ ಗಳಿಕೆ ಕಂಡ ಸಿನಿಮಾ ಎನಿಸಿದೆ. ಮಾತ್ರವಲ್ಲದೆ ರೂ. 20 ಸಾವಿರ ಕೋಟಿಗಿಂತ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರವೂ ಆಗಿದೆ.
‘ಅವತಾರ್: ದಿ ವೇ ಆಫ್ ವಾಟರ್’ಗೆ ಜೇಮ್ಸ್ ಕ್ಯಾಮೆರಾನ್ ನಿರ್ದೇಶನವಾಡಿದ್ದು ಜೇಮ್ಸ್ ಅವರೊಂದಿಗೆ ಜಾನ್ ಲ್ಯಾನ್‌ಡೌ ಬಂಡವಾಳ ಹೂಡಿದ್ದಾರೆ.
ಸಿಗೌರ್ನಿ ವೀವರ್, ಸ್ಟೇಫನ್ ಲ್ಯಾಂಗ್, ಕ್ಲಿಫ್ ಕರ್ಟೀಸ್, ಜೋಲ್ ಡೇವಿಡ್ ಮೂರ್, ಸಿಸಿಎಚ್ ಪೌಂಡರ್, ಎಡೀ ಫಾಲ್ಕೊ ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲಾರಿಗಳ ಮುಖಾಮುಖಿ ಡಿಕ್ಕಿ: ಇಬ್ಬರು ಲಾರಿ ಚಾಲಕರ ದಾರುಣ ಸಾವು
ಕುಡಿದು ಪ್ರಜ್ಞೆ ಇಲ್ಲದೇ ಬಿದ್ದ ವರ: ತನ್ನ ಸಂಬಂಧಿಯನ್ನೇ ಮದುವೆಯಾದ ವಧು!
18 ದಿನಗಳ ಕಣ್ಣಾಮುಚ್ಚಾಲೆ ಬಳಿಕ ಸಿಐಡಿಗೆ ಸಿಕ್ಕಿ ಬಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ