ಜಮ್ಮು ಕಾಶ್ಮಿರದಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ; ಇಬ್ಬರು ಯೋಧರು ಹುತಾತ್ಮ - Mahanayaka
1:31 PM Thursday 12 - December 2024

ಜಮ್ಮು ಕಾಶ್ಮಿರದಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ; ಇಬ್ಬರು ಯೋಧರು ಹುತಾತ್ಮ

army
19/02/2022

ಶ್ರೀನಗರ: ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಾಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಉಗ್ರನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜಮ್ಮು- ಕಾಶ್ಮಿರದ ಶೋಪಿಯಾನ್‍ನಲ್ಲಿ ನಡೆದಿದೆ.

ಸಂತೋಷ್ ಯಾದವ್ ಮತ್ತು ರೋಮಿತ್ ಚೌಹಾನ್ ಹುತಾತ್ಮರಾದ ಯೋಧರು. ಸಂತೋಷ್ ಯಾದವ್ ಮತ್ತು ರೋಮಿತ್ ಚೌಹಾನ್ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾದರು. ಆದರೆ ಮೃತ ಭಯೋತ್ಪಾದಕನ ಗುರುತು ಪತ್ತೆಯಾಗಿಲ್ಲ.

ಝೈನಾಪೊರಾದ ಚೆರ್‍ಮಾರ್ಗ್ ಪ್ರದೇಶದಲ್ಲಿ ನಿರ್ದಿಷ್ಟ ಮಾಹಿತಿಯ ಮೇರೆಗೆ ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ಯೋಧರು ಪ್ರಾರಂಭಿಸಿದರು. ಯೋಧಪಡೆಗಳ ಜಂಟಿ ತಂಡವು ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಯೋಧರು ಪ್ರತಿದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಲಿತ ಕುಟುಂಬಕ್ಕೆ, ನ್ಯಾಯಾಲಯಕ್ಕೆ ವಂಚನೆ: ವಕೀಲನಿಗೆ ಜೀವಾವಧಿ ಶಿಕ್ಷೆ

ಭಾರತೀಯ ವಧುವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಿಟನ್ ಅಧಿಕಾರಿ

ಫ್ಲ್ಯಾಟ್‌ ನೊಳಗೆ ಅರೆನಗ್ನ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ: ದೂರು ದಾಖಲು

ದೇವಸ್ಥಾನದಲ್ಲಿ ಎಸ್‌ ಸಿ ಮಹಿಳೆಗೆ ಪ್ರಾರ್ಥನೆ ಮಾಡಲು ಅವಕಾಶ ನೀಡದ 20 ಅರ್ಚಕರು: ಪ್ರಕರಣ ದಾಖಲು

ಕೆಳಜಾತಿಯ ಯುವಕನೊಂದಿಗೆ ಪುತ್ರಿ ಮದುವೆ: ರುಬ್ಬುವ ಕಲ್ಲು ಎತ್ತಿ ಹಾಕಿ ಹೆಂಡತಿ ಮಕ್ಕಳ ಹತ್ಯೆಗೈದು ತಾನೂ ಆತ್ಮಹತ್ಯೆಗೈದ ತಂದೆ

 

ಇತ್ತೀಚಿನ ಸುದ್ದಿ