ಜ.1 ಸಾಮಾಜಿಕ ಸಂಕೋಲೆಗಳಿಂದ ಮುಕ್ತಾಗುವ ದಿನ | ಪ್ರಕಾಶ್ ಅಂಬೇಡ್ಕರ್ - Mahanayaka
6:04 PM Wednesday 30 - October 2024

ಜ.1 ಸಾಮಾಜಿಕ ಸಂಕೋಲೆಗಳಿಂದ ಮುಕ್ತಾಗುವ ದಿನ | ಪ್ರಕಾಶ್ ಅಂಬೇಡ್ಕರ್

01/01/2021

ಪುಣೆ: ಜನವರಿ 1 ಪ್ರತಿಯೊಬ್ಬರೂ ಸಾಮಾಜಿಕ ಸಂಕೋಲೆಗಳಿಂದ ಮುಕ್ತರಾಗುವ ದಿನ, ಭೀಮಾ ಕೋರೆಗಾಂವ್ ವಿಜಯೋತ್ಸವ ಪೇಶ್ವೆ ಆಡಳಿತ ಜಾರಿಯಾದ ದಿನ ಎಂದು  ಪ್ರಕಾಶ್ ಅಂಬೇಡ್ಕರ್ ತಿಳಿಸಿದರು.

ಭೀಮಾ ಕೋರೆಗಾಂವ್ ವಿಜಯೋತ್ಸವದ 203ನೇ ವರ್ಷಾಚರಣೆಯ ದಿನದಂದು ಕೊರೆಗಾಂವ್  ವಿಜಯ ಸ್ತಂಭ, ಸ್ಮಾರಕಕ್ಕೆ ನಮನ ಸಲ್ಲಿಸಿ ಪ್ರಕಾಶ್ ಅಂಬೇಡ್ಕರ್ ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಬೃಹತ್ ಮಟ್ಟದಲ್ಲಿ ವಿಜಯೋತ್ಸವ ಆಚರಣೆಗೆ ಅವಕಾಶವಿರಲಿಲ್ಲ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಗೃಹಸಚಿವ ಅನಿಲ್ ದೇಶ್‌ಮುಖ್, ಇಂಧನ ಸಚಿವ ಡಾ.ನಿತಿನ್‌ ರಾವುತ್, ವಂಚಿತ್‌ ಬಹುಜನ ಅಂಘಡಿ (ವಿಬಿಎ) ಅಧ್ಯಕ್ಷ ಪ್ರಕಾಶ್‌ ಅಂಬೇಡ್ಕರ್ ಭೇಟಿ ನೀಡಿ ನಮನ ಸಲ್ಲಿಸಿದರು.

1818ರ ಜನವರಿ 1ರಂದು ಕೇವಲ 500 ಮಹರ್ ಸೈನಿಕರು 30 ಸಾವಿರಕ್ಕೂ ಅಧಿಕ ಪೇಶ್ವೆ ಸೈನಿಕರನ್ನು ಸೋಲಿಸಿ ದಾಖಲೆ ಬರೆದಿದ್ದರು. ಜಾತಿ, ಅಸ್ಪೃಶ್ಯತೆಯ ವಿರುದ್ಧ ಶೋಷಿತರು ನೀಡಿದ ದಿಟ್ಟ ಹೋರಾಟ ಅದಾಗಿತ್ತು. ಪ್ರತೀ ವರ್ಷವೂ ಕೊರೆಗಾಂವ್ ವಿಜಯೋತ್ಸವದಂದು ಕೋಟ್ಯಂತರ ಜನರು ಆಗಮಿಸಿ¸ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಾರೆ.

ಇತ್ತೀಚಿನ ಸುದ್ದಿ